ಬೆಂಗಳೂರು: ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ವೇಗಕ್ಕೆ ಕಡಿವಾಣ ಹಾಕಲಾಗಿದೆ. ಅಪಘಾತ ಹೆಚ್ಚಳ ಹಿನ್ನೆಲೆಯಲ್ಲಿ ಸ್ಪೀಡ್ ಲಿಮಿಟ್ ಬಗ್ಗೆ ಎಡಿಜೆಪಿ ಅಲೋಕ್ ಕುಮಾರ ಟ್ವೀಟ್ ಮಾಡಿದ್ದಾರೆ.
122 ಕಿಲೋಮೀಟರ್ ವೇಗದಲ್ಲಿ ವಾಹನ ಸಂಚಾರದಿಂದ ಅಪಘಾತ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಪಘಾತ ತಡೆಯಲು ಗಂಟೆಗೆ 100 ಕಿಲೋಮೀಟರ್ ವೇಗಮಿತಿ ನಿಗದಿಪಡಿಸಲಾಗಿದೆ.
ಮಾರ್ಚ್ 12 ರಂದು ಉದ್ಘಾಟನೆಯಾದ ನಂತರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ 132 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಈ ಹೆಚ್ಚಿನ ಪ್ರಮಾಣದ ಅಪಘಾತಗಳನ್ನು ಕಡಿಮೆ ಮಾಡಲು ಅಧಿಕಾರಿಗಳು ಪರಿಹಾರಗಳನ್ನು ಅನ್ವೇಷಿಸುವುದನ್ನು ಮುಂದುವರೆಸಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅತಿ ವೇಗದ ಚಾಲನೆಗಾಗಿ ಸ್ಪೀಡ್ ರಾಡಾರ್ ಗನ್‌ಗಳನ್ನು ಬಳಸಿ ಪ್ರಕರಣಗಳನ್ನು ಬುಕ್ ಮಾಡುವುದು. ಈ ನಿಟ್ಟಿನಲ್ಲಿ ರಾಮನಗರ ಎಸ್ಪಿ ಮತ್ತು ಅವರ ತಂಡದ ಕಾರ್ಯದ ಶ್ಲಾಘನೀಯವಾಗಿದೆ. ಜೀವ ಉಳಿಸಲು ಟ್ರಾಫಿಕ್ ನಿಯಮಗಳನ್ನು ಅನುಸರಿಸಿ, ದಂಡವನ್ನು ಉಳಿಸಲು ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.