
ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಲನಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರು ಚಿತ್ರದ ಬಗ್ಗೆ ಸದಾಭಿಪ್ರಾಯ ನೀಡಿದ್ದಾರೆ.
ಇದೀಗ, ಜಾಲತಾಣದಲ್ಲಿ ವಿಶೇಷ ಚೇತನ ವ್ಯಕ್ತಿಯೊಬ್ಬರು ಈ ಚಿತ್ರದ ಹಾಡನ್ನು ಹಾಡು ವೈರಲ್ ಆಗಿದೆ. ದೃಷ್ಟಿಹೀನರಾದ ಈ ವ್ಯಕ್ತಿ ಪಾತಾಳ ಪಾತಾಳ….. ಹಾಡುವುದನ್ನು ವಿಡಿಯೋದಲ್ಲಿ ಕಾಣಬಹುದು ಮತ್ತು ಅವರು ಪಕ್ಕ ವಾದ್ಯಕ್ಕಾಗಿ ಟಬ್ ಅನ್ನು ಬಳಸಿರುವುದು ವಿಶೇಷವಾಗಿದೆ.
ʼಪಿಎಂ ಆವಾಸ್ ಯೋಜನೆʼಯಡಿ 1.12 ಕೋಟಿ ಮನೆ ನಿರ್ಮಾಣ, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ತಿಳಿದುಕೊಳ್ಳಲು ಇಲ್ಲಿದೆ ಟಿಪ್ಸ್
ಕಮಲ್ ಹಾಸನ್ ಅಭಿಮಾನಿಗಳ ಪುಟದಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಇದು 40 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಅವರ ಅದ್ಭುತ ಧ್ವನಿ ಸಹಜವಾಗಿಯೇ ಈ ವಿಡಿಯೋದ ಹೈಲೈಟ್ ಎನಿಸಿದೆ. ನೆಟ್ಟಿಗರು ಅವರ ಪ್ರಯತ್ನ ಶ್ಲಾಘಿಸಿ ಪ್ರತಿಕ್ರಿಯೆ ನೀಡಿದ್ದಾರೆ.