alex Certify ಕೈ ಇಲ್ಲದಿದ್ದರೂ ಕೊರಗುತ್ತಾ ಕೂರಲಿಲ್ಲ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈ ಇಲ್ಲದಿದ್ದರೂ ಕೊರಗುತ್ತಾ ಕೂರಲಿಲ್ಲ ಬಾಲಕಿ

ಪಾಟ್ನಾ: ಆಗದು ಎಂದು ಕೈಕಟ್ಟಿ ಕುಳಿತರೆ, ಆಗದು ಕೆಲಸವು ಮುಂದೆ…. ಅಂತಾ ಹಾಡೊಂದಿದೆ. ನಮ್ಮಿಂದ ಸಾಧ್ಯವಿಲ್ಲ ಅಂತಾ ಹೆದರಿ ಕೂತರೆ ನಾವು ಏನು ಸಾಧನೆ ಮಾಡಲು ಆಗೋದೇ ಇಲ್ಲ. ಅದೇ ದೃಢಮನಸ್ಸಿನಿಂದ ನಮ್ಮ ಕೆಲಸಕ್ಕೆ ಹೆಚ್ಚಿನ ಒತ್ತು ಕೊಟ್ಟರೆ ಇತಿಹಾಸವನ್ನೇ ಸೃಷ್ಟಿಸಬಹುದು. ಸದ್ಯ, ಬಿಹಾರದ ಬಾಲಕಿಯೊಬ್ಬಳು ಅಪಘಾತದಲ್ಲಿ ಕೈ ಕಳೆದುಕೊಂಡರೂ ಕೊರಗುತ್ತಾ ಕೂರದೆ, ಧೈರ್ಯವಾಗಿ ಎದುರಿಸಲು ಮುಂದಾಗಿದ್ದಾಳೆ.

ಹೌದು, 14 ವರ್ಷದ ಬಾಲಕಿಯೊಬ್ಬಳು ಅಪಘಾತದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡ ನಂತರ ತನ್ನ ಕಾಲ್ಬೆರಳುಗಳಿಂದ ಬರೆಯಲು ಕಲಿಯುವ ಮೂಲಕ ತನ್ನ ಶಿಕ್ಷಣವನ್ನು ಮುಂದುವರೆಸಿದ್ದು, ಧೈರ್ಯದ ಪ್ರತಿರೂಪವಾಗಿದ್ದಾಳೆ. ಬಿಹಾರದ ಪಾಟ್ನಾ ಮೂಲದ ತನು ಕುಮಾರಿ ಎಂಬ ಬಾಲಕಿಯು, ತನಗೆ 7 ವರ್ಷಗಳ ಹಿಂದೆ ಎದುರಾದ ದುರ್ಘಟನೆಗೆ ಕೊರಗದೆ ಧೈರ್ಯವಾಗಿ ಎದುರಿಸಲು ತೀರ್ಮಾನಿಸಿದ್ದಾಳೆ. ಸರಕಾರಿ ಶಾಲೆಯಲ್ಲಿ ಓದುತ್ತಿರುವ ತನು ಕುಮಾರಿ, 10ನೇ ತರಗತಿಗೆ ರೆಗ್ಯುಲರ್ ವಿದ್ಯಾರ್ಥಿನಿಯಾಗಿ ದಾಖಲಾಗಿದ್ದಾಳೆ. ಚೆನ್ನಾಗಿ ಓದಿ ಮುಂದೆ ಶಿಕ್ಷಕಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾಳೆ.

SHOCKING NEWS: ಒಂದೇ ಮನೆಯ ಮೂವರು ಮಹಿಳೆಯರು ಆತ್ಮಹತ್ಯೆ

“ನನ್ನ ಅಂಗವೈಕಲ್ಯದಿಂದಾಗಿ ನಾನು ಹಿಂದೆ ಉಳಿಯುತ್ತೇನೆ ಎಂದು ನನಗೆ ಅನಿಸುವುದಿಲ್ಲ. ಅಪಘಾತದ ನಂತರ, ನಾನು ಕ್ರಮೇಣ ನನ್ನ ಕಾಲ್ಬೆರಳುಗಳಿಂದ ಬರೆಯಲು ಕಲಿತೆ. ಅಧ್ಯಯನ ಮಾಡುವುದರ ಹೊರತಾಗಿ, ಕ್ರೀಡೆ ಹಾಗೂ ಚಿತ್ರಕಲೆ ಚಟುವಟಿಕೆಗಳಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ” ಎಂದು ತನು ಹೇಳಿದ್ದಾರೆ.

ತನು ಕುಮಾರಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಆಕೆಯ ತಾಯಿ ಸುಹಾ ದೇವಿ, ಮಗಳ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು. “2014ರಲ್ಲಿ ಮನೆಯ ಟೆರೇಸ್ ನಲ್ಲಿ ಆಡುತ್ತಿದ್ದಾಗ ವಿದ್ಯುಂತ್ ತಂತಿ ಮುಟ್ಟಿದ್ದರಿಂದ ತನು, ಕೈಗಳನ್ನು ಕಳೆದುಕೊಳ್ಳಬೇಕಾಯಿತು. ಆರಂಭದಲ್ಲಿ ಅನೇಕ ಸಮಸ್ಯೆ ಎದುರಿಸಬೇಕಾಯಿತು. ದೈನಂದಿನ ಕೆಲಸಗಳನ್ನು ಮಾಡಲು ಕಲಿಯುವ ಇಚ್ಛಾಶಕ್ತಿಯಿರುವುದು ನನಗೆ ಸಂತೋಷವಾಗಿದೆ. ಅವಳು ಕಾಲುಗಳಿಂದ ಬರೆಯುತ್ತಿರುವುದು ನನಗೆ ತುಂಬಾ ಹೆಮ್ಮೆ ತಂದಿದೆ” ಎಂದು ಸುಹಾ ದೇವಿ ತಿಳಿಸಿದ್ದಾರೆ.

ಓದಿನಲ್ಲೂ ಮುಂದಿರುವ ಈಕಗೆ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗಾಗಿ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾಳೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...