ಚೆನ್ನೈ: ಮಂಡಲ-ಮಕರವಿಳಕ್ಕು ಋತುವಿನಲ್ಲಿ ಶಬರಿಮಲೆಗೆ ಭಾರಿ ಜನದಟ್ಟಣೆಯನ್ನು ಪರಿಹರಿಸುವ ಹಿನ್ನೆಲೆ ದಕ್ಷಿಣ ರೈಲ್ವೆ ಚೆನ್ನೈ ಮತ್ತು ಕೊಟ್ಟಾಯಂ ನಡುವೆ ವಿಶೇಷ ವಂದೇ ಭಾರತ್ ರೈಲು ಸೇವೆಯನ್ನು ಘೋಷಿಸಿದೆ.
ರೈಲು ಸಂಖ್ಯೆ 06151 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಕೊಟ್ಟಾಯಂ ವಂದೇ ಭಾರತ್ ಶಬರಿ ವಾರಕ್ಕೆರಡು ಬಾರಿ ವಿಶೇಷ ರೈಲು ಡಿಸೆಂಬರ್ 15, 17, 22 ಮತ್ತು 24 ರಂದು ಬೆಳಿಗ್ಗೆ 4.30 ಕ್ಕೆ ಚೆನ್ನೈನಿಂದ ಹೊರಡಲಿದೆ. ಅದೇ ದಿನ ಸಂಜೆ 4.15ಕ್ಕೆ ಕೊಟ್ಟಾಯಂ ತಲುಪಲಿದೆ.
ರೈಲು ಸಂಖ್ಯೆ 06152 ಕೊಟ್ಟಾಯಂ-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಶಬರಿ ವಾರಕ್ಕೆರಡು ಬಾರಿ ವಿಶೇಷ ರೈಲು ಡಿಸೆಂಬರ್ 16, 18, 23 ಮತ್ತು 25 ರಂದು ಬೆಳಿಗ್ಗೆ 4.40 ಕ್ಕೆ ಕೊಟ್ಟಾಯಂ ನಿಲ್ದಾಣದಿಂದ ಹೊರಟು ಅದೇ ದಿನ ಸಂಜೆ 5.15 ಕ್ಕೆ ಚೆನ್ನೈ ತಲುಪಲಿದೆ.
ಪೆರಂಬೂರ್, ಕಟಪಾಡಿ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಅಲುವಾ ಮತ್ತು ಎರ್ನಾಕುಲಂ ಉತ್ತರದ 10 ನಿಲ್ದಾಣಗಳಲ್ಲಿ ಇದು ನಿಲ್ಲುತ್ತದೆ.ವಂದೇ ಭಾರತ್ 8 ಬೋಗಿಗಳನ್ನು ಹೊಂದಿದೆ. ಕಾಸರಗೋಡು-ತಿರುವನಂತಪುರಂ ಮಾರ್ಗದಲ್ಲಿ ಈಗಾಗಲೇ ಇಂತಹ ಎರಡು ಸೆಮಿ ಹೈಸ್ಪೀಡ್ ರೈಲುಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಇದು ಕೇರಳದ ಮೂರನೇ ವಂದೇ ಭಾರತ್ ಆಗಿದೆ.