ಬೆಂಗಳೂರು : ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ಬೆಂಗಳೂರಿನಿಂದ ವಿಶೇಷ ರೈಲು ಹೊರಟಿದ್ದು, ಅಯೋಧ್ಯೆ ಶ್ರೀರಾಮ ದರ್ಶನ ಅಭಿಯಾನದಡಿ ಬಿಜೆಪಿ ಕಾರ್ಯಕರ್ತರು ದರ್ಶನಕ್ಕೆ ತೆರಳುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತರನ್ನು ಹೊತ್ತ ವಿಶೇಷ ರೈಲೊಂದು ಇಂದು ಬೆಳಗ್ಗೆ 3.40ಕ್ಕೆ ನಗರದ ವಿಶ್ವೇಶ್ವರಯ್ಯ ವಿಮಾನ ನಿಲ್ದಾಣದಿಂದ ಅಯೋಧ್ಯೆಗೆ ತೆರಳಿತು. ಫೆಬ್ರುವರಿ 16, ಮಧ್ಯಾಹ್ನದ ಸಮಯ ಪವಿತ್ರ ನಗರಿಯ ಅಯೋಧ್ಯೆ ಧಾಮ ತಲುಪಲಿದೆ. ಮರುದಿನ ಬೆಳಗ್ಗೆ ಅಂದರೆ ಫೆಬ್ರುವರಿ 17 ಬೆಳಗ್ಗೆ ಅಯೋಧ್ಯೆ ಧಾಮದಿಂದ ವಾಪಸ್ಸು ಬರುವ ಇದೇ ರೈಲು ಫೆಬ್ರುವರಿ 20 ಬೆಳಗ್ಗೆ ಬೆಂಗಳೂರು ತಲುಪಲಿದೆ.
ಅಯೋಧ್ಯೆ ಶ್ರೀರಾಮ ದರ್ಶನ ಅಭಿಯಾನದಡಿ ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳ 1450 ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಶ್ರೀರಾಮನ ದರ್ಶನ ಪಡೆಯಲಿದ್ದಾರೆ.