ನವದೆಹಲಿ: ಜೂನ್ 24 ರಿಂದ ಸಂಸತ್ ವಿಶೇಷ ಅಧಿವೇಶನ ನಡೆಸುವ ಸಾಧ್ಯತೆ ಇದೆ. 18ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸಂಸದರ ಪ್ರಮಾಣ ಸ್ವೀಕಾರ ಮತ್ತು ಸ್ಪೀಕರ್ ಆಯ್ಕೆಯ ಸಂಬಂಧ ವಿಶೇಷ ಅಧಿವೇಶನ ನಡೆಸಲಾಗುವುದು.
ಜೂನ್ 24, 25 ರಂದು ರಾಷ್ಟ್ರಪತಿಗಳು ನೇಮಕ ಮಾಡುವ ಹಂಗಾಮಿ ಸ್ಪೀಕರ್ ನೂತನ ಸಂಸದರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಜೂನ್ 26ರಂದು ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಕಳೆದ ಎರಡು ಬಾರಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದ್ದು, ಬಿಜೆಪಿ ಸಂಸದರನ್ನೇ ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಈ ಬಾರಿ ಪ್ರಮುಖ ಮಿತ್ರ ಪಕ್ಷಗಳಾಗಿರುವ ಟಿಡಿಪಿ, ಜೆಡಿಯುಸ್ ಕೂಡ ಸ್ಪೀಕರ್ ಸ್ಥಾನಕ್ಕೆ ಪೈಪೋಟಿ ನಡೆಸುವ ಸಾಧ್ಯತೆ ಇದೆ.
ಬಿಜೆಪಿಯಿಂದ ರಾಜಮಂಡ್ರಿ ಸಂಸದೆ ಪುರಂದರೇಶ್ವರಿ ಅವರ ಹೆಸರು ಕೇಳಿ ಬರುತ್ತಿದೆ. ಹೊಸ ಸ್ಪೀಕರ್ ನೇತೃತ್ವದಲ್ಲಿ ಜೂನ್ 27ರಿಂದ ವಿಶೇಷ ಅಧಿವೇಶನ ಮುಂದುವರೆಯಲಿದ್ದು, ಜುಲೈ 3ರವರೆಗೆ ನಡೆಯಲಿದೆ.