
ಇದೊಂದು ವಿಚಿತ್ರ ಪ್ರಕರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮೇಲಿನ ಮನೆಯಲ್ಲಿ ತನ್ನ ಪತ್ನಿ ಮಕ್ಕಳೊಂದಿಗೆ ವಾಸವಿದ್ದ ವ್ಯಕ್ತಿಯೊಬ್ಬ ಕೆಳಗಿನ ಮನೆಯಲ್ಲಿದ್ದ ವಿವಾಹಿತೆ ಜೊತೆ ಪರಾರಿಯಾಗಿದ್ದು, ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನವೀದ್ ಎಂಬಾತ ತನ್ನ ಪತ್ನಿ ಜೀನತ್ ಹಾಗೂ ಇಬ್ಬರು ಮಕ್ಕಳ ಜೊತೆ ಮಾರುತಿ ನಗರದ ಮನೆ ಒಂದರಲ್ಲಿ ಬಾಡಿಗೆಗೆ ಇದ್ದ. ಕೆಳ ಮಹಡಿಯಲ್ಲಿ ಮುಬಾರಕ್ ಮತ್ತು ಶಾಜಿಯಾ ಎಂಬ ದಂಪತಿ ವಾಸವಿದ್ದು ಇವರಿಗೂ ಇಬ್ಬರು ಮಕ್ಕಳಿದ್ದಾರೆ.
ಇದೀಗ ನವೀದ್ ಮತ್ತು ಶಾಜಿಯಾ ಪರಾರಿಯಾಗಿದ್ದು, ಅನೈತಿಕ ಸಂಬಂಧ ಹೊಂದಿದ್ದ ಇವರುಗಳು ಪ್ಲಾನ್ ಮಾಡಿಯೇ ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಈಗ ಪತ್ನಿ ಕಾಣೆಯಾಗಿರುವ ಕುರಿತು ಮುಬಾರಕ್ ಹಾಗೂ ಪತಿ ಕಾಣೆಯಾಗಿರುವ ಕುರಿತು ಜೀನತ್ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
