ಭಾರತದ ಕುಸ್ತಿಪಟು ‘ವಿನೇಶ್ ಪೋಗಟ್’ ಗೆ ಹರಿಯಾಣ ಸರ್ಕಾರದಿಂದ ವಿಶೇಷ ಗೌರವ ಸಲ್ಲಿಸಿದ್ದು, 1.5 ಕೋಟಿ ಬಹುಮಾನ ಘೋಷಣೆ ಮಾಡಿದೆ.
ಪ್ಯಾರಿಸ್ ಒಲಂಪಿಕ್ಸ್ ನ 50 ಕೆಜಿ ಕುಸ್ತಿ ವಿಭಾಗದಲ್ಲಿ 100 ಗ್ರಾಂ ತೂಗ ಹೆಚ್ಚಾದ ಹಿನ್ನೆಲೆ ಅನರ್ಹತೆಗೊಂಡ ಭಾರತದ ಕುಸ್ತಿಪಟು ‘ವಿನೇಶ್ ಪೋಗಟ್’ ಗೆ ಹರಿಯಾಣ ಸರ್ಕಾರ ವಿಶೇಷ ಗೌರವ ಸಲ್ಲಿಸಿದೆ. ಅವರ ಸಾಧನೆಯನ್ನು ಪರಿಗಣಿಸಿ 1.5 ಕೋಟಿ ನೀಡುವುದಾಗಿ ಸಿಎಂ ನವಾಬ್ ಸೈನಿ ಘೋಷಿಸಿದ್ದಾರೆ.
ಹರಿಯಾಣದ ನಮ್ಮ ಧೈರ್ಯಶಾಲಿ ಮಗಳು ವಿನೇಶ್ ಫೋಗಟ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಒಲಿಂಪಿಕ್ಸ್ನಲ್ಲಿ ಫೈನಲ್ಗೆ ಪ್ರವೇಶಿಸಿದ್ದರು. ಅವರು ಯಾವುದೇ ಕಾರಣಕ್ಕಾಗಿ ಒಲಿಂಪಿಕ್ಸ್ ಫೈನಲ್ ಆಡದಿರಬಹುದು, ಆದರೆ ನಮ್ಮೆಲ್ಲರಿಗೂ ಅವರು ಚಾಂಪಿಯನ್. ವಿನೇಶ್ ಫೋಗಟ್ ಅವರನ್ನು ಪದಕ ವಿಜೇತರಂತೆ ಸ್ವಾಗತಿಸಲು ಮತ್ತು ಸನ್ಮಾನಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಒಲಿಂಪಿಕ್ ಬೆಳ್ಳಿ ಪದಕ ವಿಜೇತರಿಗೆ ಹರಿಯಾಣ ಸರ್ಕಾರ ನೀಡುವ ಎಲ್ಲಾ ಗೌರವಗಳು, ಬಹುಮಾನಗಳು ಮತ್ತು ಸೌಲಭ್ಯಗಳನ್ನು ವಿನೇಶ್ ಫೋಗಟ್ ಅವರಿಗೆ ಕೃತಜ್ಞತೆಯಿಂದ ನೀಡಲಾಗುವುದು ಎಂದು ಎಂ ನವಾಬ್ ಸೈನಿ ಟ್ವೀಟ್ ಮಾಡಿದ್ದಾರೆ.