alex Certify SPECIAL: 97 ವಸಂತಗಳನ್ನು ಪೂರೈಸಿದ ಭಾರತದ ಎಲೆಕ್ಟ್ರಿಕ್​ ರೈಲು ಸೇವೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SPECIAL: 97 ವಸಂತಗಳನ್ನು ಪೂರೈಸಿದ ಭಾರತದ ಎಲೆಕ್ಟ್ರಿಕ್​ ರೈಲು ಸೇವೆ..!

ಕೇಂದ್ರ ರೈಲ್ವೆಯು ಮುಂಬೈನಲ್ಲಿ ವಿದ್ಯುತ್​​​ ಬಹು ಘಟಕಗಳನ್ನು ನಿರ್ಮಿಸಿ ಬುಧವಾರಕ್ಕೆ 97 ವರ್ಷಗಳನ್ನು ಪೂರೈಸಿದೆ. 1925ರಲ್ಲಿ ಇದೇ ದಿನದಂದು ನಾಲ್ಕು ಕಾರುಗಳೊಂದಿಗೆ ಮೊದಲ ಇಎಂಯು ಸೇವೆಯು ಆಗಿನ ಮುಂಬೈ ವಿಟಿ (ಈಗಿನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್,​​ ಮುಂಬೈ) ಮತ್ತು ಕುರ್ಲಾದಿಂದ ಬಂದರು ಮಾರ್ಗದಲ್ಲಿ ಪರಿಚಯಿಸಲಾಯಿತು. ಇದು ಭಾರತೀಯ ರೈಲ್ವೆ ಇಲಾಖೆಯಲ್ಲಿಯೇ ಮೊದಲ ಪ್ರಯತ್ನವಾಗಿತ್ತು. ಇದನ್ನು ಆಗಿನ ಮುಂಬೈ ಗವರ್ನರ್​ ಸರ್​ ಲೆಸ್ಸಿ ವಿಲ್ಸನ್​ ಅನಾವರಣಗೊಳಿಸಿದ್ದರು.

ಸೆಂಟ್ರಲ್ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅನಿಲ್ ಕುಮಾರ್ ಲಹೋಟಿ, ಸಿಆರ್ ತನ್ನ ಪ್ರಯಾಣಿಕರಿಗೆ ನಾಲ್ಕು ಮಾರ್ಗಗಳಲ್ಲಿ ಉತ್ತಮ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.

ಮೊದಲ ಸೇವೆಯು ಆಗಿನ ಬಾಂಬೆ ವಿಟಿಯಿಂದ (ಈಗ ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬೈ) ಕೂರ್ಲಾ (ಈಗ ಕುರ್ಲಾ) ಗೆ ಬಂದರು ಮಾರ್ಗದಲ್ಲಿ ಸಾಗಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...