ರೈಲಿನಲ್ಲಿ ನೀವು ಮೊದಲ ಬಾರಿ ಪ್ರಯಾಣಿಸುತ್ತಿದ್ದೀರಾ, ನಿಮಗೆ ಮಾತ್ರವಲ್ಲ ಹಲವು ಬಾರಿ ರೈಲಿನಲ್ಲಿ ಪ್ರಯಾಣಿಸಿದ್ದರೂ ನಿಮಗೆ ತಿಳಿದಿರದ ಕೆಲವು ಸಂಗತಿಗಳನ್ನು ಹೇಳುತ್ತೇವೆ ಕೇಳಿ.
ಮಿಡಲ್ ಹಾಗೂ ಅಪ್ಪರ್ ಬರ್ತ್ ಸೀಟ್ ಗಳನ್ನು ಬುಕ್ ಮಾಡಿದವರು ರಾತ್ರಿ 9:00 ರಿಂದ ಬೆಳಿಗ್ಗೆ 6ರ ತನಕ ಮಾತ್ರ ಆ ಸೀಟುಗಳಲ್ಲಿ ಮಲಗಬಹುದು. ಕೆಳಗಿನ ಸೀಟಿನವರು ಕುಳಿತುಕೊಳ್ಳಬೇಕೆಂದು ಬಯಸಿದರೆ ಆ ಹೊತ್ತಿಗೂ ಮೀರಿ ನೀವು ಮಲಗಿರುವಂತಿಲ್ಲ. ಅಂದರೆ ನಿಮ್ಮ ಸೀಟ್ ಅನ್ನು ಮಡಿಚಿಟ್ಟು ಕೆಳಗಿಳಿಯಬೇಕಾಗುತ್ತದೆ.
ಒಂದು ಸ್ಟೇಷನ್ನಲ್ಲಿ ರೈಲು ಮಿಸ್ ಆಯಿತು ಎಂದಾದರೆ, ಮುಂದಿನ ಎರಡು ನಿಲ್ದಾಣಗಳಲ್ಲಿ ನೀವು ರೈಲು ಹತ್ತಬಹುದು. ಅಂದರೆ ರೈಲಿನ ಪರೀಕ್ಷಕರು ನಿಮಗೆ ನಿಗದಿಪಡಿಸಿದ ಆಸನವನ್ನು ಕನಿಷ್ಠ ಒಂದು ಗಂಟೆಯ ತನಕ ಅಥವಾ ಮುಂದಿನ ಎರಡು ನಿಲ್ದಾಣ ಕಳೆಯುವ ತನಕ ಇತರರಿಗೆ ಕೊಡುವಂತಿಲ್ಲ.
ರೈಲು ಸಂಚರಿಸುವ ವೇಳೆ ಏನಾದರೂ ಸಮಸ್ಯೆಯಾದರೆ ಪ್ರಯಾಣದ ಪೂರ್ಣ ಮರುಪಾವತಿ ಮಾಡಲಾಗುತ್ತದೆ. ಬ್ಯಾಕಪ್ ವ್ಯವಸ್ಥೆ ಹೊಂದಿಲ್ಲದ್ದರೆ ಸಂಪೂರ್ಣ ಶುಲ್ಕ ಮರುಪಾವತಿ ಮಾಡಲಾಗುತ್ತದೆ. ಇನ್ನೊಂದು ರೈಲಿನಲ್ಲಿ ನೀವು ಹೋಗಲು ಸಿದ್ದರಿಲ್ಲದಿದ್ದರೂ ಪ್ರಯಾಣಿಸಿದ ವಿಭಾಗದ ಶುಲ್ಕವನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ನೀಡಲಾಗುತ್ತದೆ.
ರಾತ್ರಿ 10:00 ಕಳೆದ ಬಳಿಕವೂ ಪರೀಕ್ಷಕರು ಟಿಕೇಟ್ ಪರಿಶೀಲಿಸಲು ಬರುವುದು ಸಾಧುವಲ್ಲ. ಆ ಸಮಯದಲ್ಲಿ ನೀವು ವಿಚಾರಣೆಯನ್ನು ನಿರಾಕರಿಸಬಹುದು. ಆದರೆ ಬೆಳಿಗ್ಗೆ 6ರಿಂದ ರಾತ್ರಿ ಹತ್ತರ ತನಕ ಟಿಕೆಟ್ ಪರಿಶೀಲನೆಗೆ ಸಹಕರಿಸಲೇಬೇಕು.