ಬೆಂಗಳೂರು: ನೂತನ ಸರ್ಕಾರದಲ್ಲಿ ಸಚಿವರಾಗಲು ತೀವ್ರ ಪೈಪೋಟಿ ಶುರುವಾಗಿದೆ. ಹಿರಿಯ, ಕಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ.
ಹಿರಿಯ ಶಾಸಕರಿಗೆ ಸಭಾಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್ ನಲ್ಲಿ ಚರ್ಚೆ ನಡೆದಿದೆ. ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ, ಹೆಚ್.ಕೆ. ಪಾಟೀಲ್, ಕೆ.ಎನ್. ರಾಜಣ್ಣ ಅವರನ್ನು ಸ್ಪೀಕರ್ ಮಾಡುವ ಕುರಿತು ಪಕ್ಷದಲ್ಲಿ ಚರ್ಚೆ ನಡೆದಿದೆ. ಆದರೆ, ಇವರು ಸಭಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.
ತಮ್ಮ ಹಿರಿತನಕ್ಕೆ ಹೊಂದುವ ಸಚಿವ ಸ್ಥಾನ ನೀಡಿ, ಇಲ್ಲದಿದ್ದರೆ ತಾವು ಶಾಸಕರಾಗಿ ಉಳಿಯುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಆರ್.ವಿ. ದೇಶಪಾಂಡೆ ಮತ್ತು ಹೆಚ್.ಕೆ. ಪಾಟೀಲ್ ಹೇಳಿದ್ದಾರೆ. ಸಭಾಧ್ಯಕ್ಷರಾಗಲು ಟಿ.ಬಿ ಜಯಚಂದ್ರ ಒಪ್ಪಿಲ್ಲ. ಕೆ.ಎನ್. ರಾಜಣ್ಣ ಕೂಡ ಒಪ್ಪಿಲ್ಲ. ಸಚಿವ ಸ್ಥಾನ ಕೊಡಿ ಎಂದು ಹೇಳಿದ್ದಾರೆನ್ನಲಾಗಿದೆ.