ಅಂತರರಾಷ್ಟ್ರೀಯ ಯೋಗ ದಿನವನ್ನು ವಾರ್ಷಿಕವಾಗಿ ಜೂನ್ 21 ರಂದು ಆಚರಿಸಲಾಗುತ್ತದೆ. ವಿಶ್ವಾದ್ಯಂತ ಕೋಟ್ಯಂತರ ಜನರು ಇದನ್ನು ಆಚರಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಶುರು ಮಾಡಿದ ಈ ದಿನಾಚರಣೆಗೆ ಈಗ 9 ವರ್ಷ.
ಈ ಬಾರಿಯ ಯೋಗ ದಿನಾಚರಣೆಯಲ್ಲಿಯೂ ಅಸಂಖ್ಯ ಜನರು ಪಾಲ್ಗೊಂಡಿದ್ದರು. ಅದರಲ್ಲಿ ಒಂದು ವಿಶೇಷ ಫೋಟೋ ವೈರಲ್ ಆಗಿದೆ. ಅಂತರರಾಷ್ಟ್ರೀಯ ಯೋಗ ದಿನದ ಕುರಿತು ಹಲವಾರು ಪೋಸ್ಟ್‌ಗಳನ್ನು ನೋಡಿದ್ದೀರಿ. ಅನೇಕ ಫಿಟ್‌ನೆಸ್ ಉತ್ಸಾಹಿಗಳು ತಮ್ಮ ನೆಚ್ಚಿನ ಯೋಗ ಭಂಗಿಗಳು ಮತ್ತು ಅವುಗಳ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ, ಆದರೆ ಇದು ಎಲ್ಲಕ್ಕಿಂತ ಡಿಫರೆಂಟ್ ಆಗಿದೆ.
ಇದರಲ್ಲಿ ಹುಲಿ, ಸಿಂಹಗಳು ವಿವಿಧ ಭಂಗಿಯಲ್ಲಿ ಯೋಗಾಸನ ಮಾಡುವುದನ್ನು ನೋಡಬಹುದು. ಆನೆಯ ಚಿತ್ರವೂ ಇದೆ. ಇದು ಪ್ರಕೃತಿ ಸಹಜವಾಗಿ ಮೈ ಚಾಚಿರುವುದನ್ನು ಯೋಗಾಸನದ ಭಂಗಿ ಎಂದು ಹೇಳಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ.