ಸ್ಪೇನ್: ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಆರೋಗ್ಯ ಹದಗೆಡುತ್ತಿರುವ ನಡುವೆಯೇ, ಸ್ಪೇನ್‌ನ ಒಳಚರಂಡಿ ಕೆಲಸಗಾರನು ಆಸ್ಪತ್ರೆಯಲ್ಲಿ ತನ್ನ ಚರ್ಮದ ಕೆಳಗೆ ಹುಳುಗಳು ತೆವಳುತ್ತಿರುವುದನ್ನು ತೋರಿಸುವ ಭಯಾನಕ ವಿಡಿಯೋ ವೈರಲ್ ಆಗಿದೆ.
ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಉಲ್ಲೇಖಿಸಿದಂತೆ, 64 ವರ್ಷದ ವ್ಯಕ್ತಿ ಒಳಚರಂಡಿ ಸಂಸ್ಕರಣಾ ಉದ್ಯೋಗಿಯಾಗಿದ್ದಾನೆ. ಈತ ಅತಿಸಾರ ಮತ್ತು ತುರಿಕೆ ದದ್ದುಗಳನ್ನು ಅನುಭವಿಸಲು ಪ್ರಾರಂಭಿಸಿದಾಗ ಏನಾಯಿತು ಎಂದು ತಿಳಿಯಲು ಆಗಲಿಲ್ಲ. ನಂತರ ಆಸ್ಪತ್ರೆಗೆ ದಾಖಲಾದಾಗ ಆತ ಸ್ಟ್ರಾಂಗ್‌ಲೋಯಿಡ್ಸ್ ಸ್ಟೆರ್ಕೊರಾಲಿಸ್‌ಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.
ಇದು ಪ್ರಪಂಚದಾದ್ಯಂತ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ವಾಸಿಸುವ ಪರಾವಲಂಬಿ ರೌಂಡ್ ವರ್ಮ್ ಜಾತಿಯ ಹುಳುವಿನ ಒಂದು ವಿಧವಾಗಿದೆ ಮತ್ತು ಸ್ಟ್ರಾಂಗ್ಲೋಯಿಡಿಯಾಸಿಸ್ ಎಂಬ ರೋಗವನ್ನು ಉಂಟುಮಾಡುತ್ತದೆ. ದುಂಡಾಣು ಹುಳುಗಳು ಮಾನವನ ಚರ್ಮ ಮತ್ತು ಕಲುಷಿತ ಮಣ್ಣಿನ ನಡುವಿನ ಸಂಪರ್ಕದ ಮೂಲಕ ಹರಡುತ್ತವೆ, ನಂತರ ಅವು ಮಾನವನ ಆತಿಥೇಯವನ್ನು ಭೇದಿಸಿ ಕರುಳನ್ನು ತಲುಪುತ್ತವೆ ಮತ್ತು ಅಲ್ಲಿ ಅವು ವಯಸ್ಕರಾಗಿ ಬೆಳೆದು ಮೊಟ್ಟೆಗಳನ್ನು ಉತ್ಪತ್ತಿ ಮಾಡುತ್ತವೆ.
ನೈರ್ಮಲ್ಯ ಕೆಲಸಗಾರನಿಗೆ ಹೇಗೆ ಸೋಂಕು ತಗುಲಿತು ಎಂಬುದು ಅಸ್ಪಷ್ಟವಾಗಿದೆ, ಆದರೆ ಆ ವ್ಯಕ್ತಿ ಸ್ಪೇನ್‌ನ ನಗರ ಪ್ರದೇಶದಲ್ಲಿ ತನ್ನ ಜೀವನದುದ್ದಕ್ಕೂ ಒಳಚರಂಡಿ ನಿರ್ವಹಣೆಯಲ್ಲಿ ಕೆಲಸ ಮಾಡಿದ್ದಾನೆ ಎಂದು ವೈದ್ಯರು ಸೂಚಿಸುತ್ತಾರೆ. ಇದೀಗ ವೈದ್ಯಲೋಕವನ್ನು ಕೂಡ ಅಚ್ಚರಿಗೆ ತಳ್ಳಿದೆ.