ಫ್ರೋಜ಼ನ್ ತರಕಾರಿಗಳಲ್ಲಿ ಸತ್ತ ಇಲಿಯ ತಲೆ ಪತ್ತೆಯಾಗಿರುವ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ. ಕ್ರಿಸ್ಮಸ್ ಶಾಪಿಂಗ್ ವೇಳೆ ಫ್ರೆಂಚ್ ಸೂಪರ್ ಮಾರ್ಕೆಟ್ ನಿಂದ ಜುವಾನ್ ಜೋಸ್ ಎನ್ನುವ ವ್ಯಕ್ತಿ ಫ್ರೋಜ಼ನ್ ತರಕಾರಿಗಳನ್ನು ತಂದಿದ್ದಾನೆ.
ಕೆಲ ದಿನಗಳ ನಂತರ ಅವುಗಳನ್ನ ಬೇಯಿಸಿ ಪ್ಲೇಟ್ ಗೆ ಸರ್ವ್ ಮಾಡಿಕೊಂಡು ತಿನ್ನುವಾಗ ಇಲಿಯ ತಲೆ ದೊರತಿದೆ. ತರಕಾರಿಗಳು ಹಾಗೂ ಆಲೂಗಡ್ಡೆಯೊಂದಿಗೆ ಇಲಿಯ ತಲೆಯು ಜೋಸ್ ಬಾಯಿಗೆ ಹೋಗಿದೆ, ಆಹಾರ ಅಗಿಯುತ್ತಿದ್ದಾಗ ಜೋಸ್ ಗೆ ಬಾಯಿಯಲ್ಲಿ ಏನೋ ವಿಚಿತ್ರವಾದ, ಕುರುಕುಲು ರುಚಿ ಸಿಕ್ಕಿದೆ. ಆನಂತರ ಬಾಯಿಯಿಂದ ಆಹಾರ ಉಗುಳಿದ ಮೇಲೆ ತಾನು ಇಷ್ಟೊತ್ತು ಇಲಿ ಅಗಿಯುತ್ತಿದ್ದೆ ಎಂದು ಜೋಸ್ ಗೆ ತಿಳಿದಿದೆ.
ಸರ್ವ್ ಮಾಡಿಕೊಂಡ ಆಹಾರದಲ್ಲಿ ಎರಡುಕಣ್ಣುಗಳು ತನ್ನನ್ನೇ ನೋಡುತ್ತಿದ್ದವು, ಮೀಸೆಗಳು ಸಹ ಕಂಡಿವೆ. ಬೇರೆ ಯಾವುದೋ ತರಕಾರಿ ಇರಬಹುದು ಎಂದು ಸುಮ್ಮನಾದೆ ಆದರೆ ಆನಂತರ ಅದು ಸತ್ತ ಇಲಿಯ ತಲೆ ಎಂದು ಖಚಿತವಾಯಿತು ಎಂದು ಜೋಸ್ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾನೆ. ಸಧ್ಯ
ಜೋಸ್, ಫ್ರೆಂಚ್ ಸೂಪರ್ಮಾರ್ಕೆಟ್ ವಿರುದ್ಧ ದೂರು ದಾಖಲಿಸಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೂಪರ್ ಮಾರ್ಕೆಟ್ ವಕ್ತಾರ, ನಾವು ಆ ಆಹಾರ ಉತ್ಪನ್ನದ ತಯಾರಕರನ್ನು ಸಂಪರ್ಕಿಸಿದ್ದೇವೆ. ಅವರು ಕಳಿಸಿದ್ದ ಆಹಾರ ಪದಾರ್ಥಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ಈ ಉತ್ಪನ್ನದ ಮೇಲೆ ನಡೆಸಲಾದ ಎಲ್ಲಾ ಕ್ವಾಲಿಟಿ ಚೆಕ್ಕಿಂಗ್ ಗಳನ್ನ ನಾವು ಪರಿಶೀಲಿಸುತ್ತಿದ್ದೇವೆ. ಪ್ರತಿ ಹಂತದಲ್ಲು ನಮ್ಮ ಕ್ಲೈಂಟ್ ಜೋಸ್ ಗೆ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.