ಮ್ಯಾಂಡ್ರಿಡ್: ಅಮೆರಿಕ ಕಾನ್ಸುಲೇಟ್ ಬೆನ್ನಲ್ಲೇ ಬೆಂಗಳೂರಿನಲ್ಲಿ ಸ್ಪೇನ್ ರಾಯಭಾರ ಕಚೇರಿ ಕೂಡ ಆರಂಭವಾಗಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬೆಂಗಳೂರಿನಲ್ಲಿ ಶೀಘ್ರದಲ್ಲಿಯೇ ಸ್ಪೇನ್ ತನ್ನ ಕಾನ್ಸುಲೇಟ್ ಕಚೇರಿ ಆರಂಭಿಸಲಿದೆ ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಎರಡು ದಿನಗಳ ರಾಜತಾಂತ್ರಿಕ ಭೇಟಿ ಕೈಗೊಂಡಿರುವ ಅವರು ಮ್ಯಾಂಡ್ರಿಡ್ ನಲ್ಲಿ ಅನಿವಾಸಿ ಭಾರತೀಯರ ಜೊತೆಗಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಾರ್ಸಿಲೋನಾದಲ್ಲೂ ಭಾರತೀಯ ರಾಯಭಾರಿ ಕಚೇರಿ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಸ್ಪೇನ್ ನಿಂದ ನಮಗಾಗಿ ಹೊಸ ರಾಯಭಾರಿ ಕಚೇರಿ ತೆರೆಯಲಾಗುತ್ತದೆ ಎಂದು ಹೇಳಿದ್ದಾರೆ.
ಉಭಯ ದೇಶಗಳ ನಡುವೆ ಬಾಂಧವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ಎರಡು ದೇಶಗಳಿಗೆ ರಾಯಭಾರ ಕಚೇರಿ ಮುಖ್ಯವಾಗಿದೆ ಎಂದು ಹೇಳಿದ್ದಾರೆ.