
ಸಿಲ್ವಿಯಾ ಕಬಾಲ್ಲಾಲ್ ಹೆಸರಿನ ಈ ಬರಹಗಾರ್ತಿ ಮನಃಶಾಸ್ತ್ರಜ್ಞೆ ಸಹ ಆಗಿದ್ದಾರೆ. ’ದಿ ಹೆಲ್ ಆಫ್ ಗ್ರೇಬಿಯಲ್ಸ್ ಲಸ್ಟ್’, ’ಅಮ್ನೇಶಿಯಾ’ ಎಂಬ ಹೆಸರಿನ ಪುಸ್ತಕಗಳನ್ನು ಬರೆದು, ಸಟಾನಿಸಮ್ ವಿರುದ್ಧದ ತಮ್ಮ ನಿಲುವಿನಿಂದಾಗಿ ಸಿಲ್ವಿಯಾ ಸಾಕಷ್ಟು ವಿವಾದಗಳನ್ನೂ ಸೃಷ್ಟಿಸಿದ್ದಾರೆ.
ರಾಜೀನಾಮೆ ನೀಡುವ ನಿರ್ಧಾರದ ಮೂಲಕ ನಾವೆಲ್ ರೋಮನ್ ಕ್ಯಾಥೋಲಿಕ್ ಚರ್ಚ್ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ವ್ಯಾಟಿಕನ್ಗೂ ಬಹಳಷ್ಟು ಬಾರಿ ಭೇಟಿ ಕೊಟ್ಟಿದ್ದ ನಾವೆಲ್, ಪೋಪ್ ರನ್ನೂ ಭೇಟಿಯಾಗಿ ಫೇಮಸ್ ಆಗಿದ್ದರು.
ಪತಿ ಮುಂದೆಯೇ ಗಾಯಕಿಗೆ ಚುಂಬಿಸಲೆತ್ನಿಸಿದ ಅಭಿಮಾನಿ
ತನ್ನ ಮನದನ್ನೆಯೊಂದಿಗೆ ಬದುಕಲು ಇಚ್ಚಿಸಿರುವ 52ರ ಹರೆಯದ ನಾವೆಲ್ ಸದ್ಯ ಬಾರ್ಸಿಲೋನಾದಲ್ಲಿ ಬೇರೊಂದು ಕೆಲಸ ಹುಡುಕುತ್ತಿದ್ದಾರೆ. ಇದಕ್ಕೂ ಮುನ್ನ 18 ವರ್ಷ ವಯಸ್ಸಿನ ಯುವತಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿ, ಆಕೆಯನ್ನು ಮದುವೆಯಾಗಿ ಜೀವನ ಕಳೆಯುವ ತಮ್ಮ ಆಸೆಯಿಂದ ಸದ್ದು ಮಾಡಿದ್ದ ಇದೇ ಬಿಶಪ್ ಹೀಗೆ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ.
2010ರಲ್ಲಿ ತಮ್ಮ 41ನೇ ವಯಸ್ಸಿಗೇ ಬಿಶಪ್ ಆದ ನಾವೆಲ್, ಈ ಹುದ್ದೆಗೇರಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. ಕ್ಯಾಥೋಲಿಕ್ ಸ್ವಾತಂತ್ರ್ಯದ ಕುರಿತು ದೊಡ್ಡ ದನಿಯಾಗಿರುವ ನಾವೆಲ್ ಇದೇ ವಿಚಾರವಾಗಿ ಬಹಳಷ್ಟು ಬಾರಿ ತೊಂದರೆಗೆ ಸಿಲುಕಿದ್ದಾರೆ.