ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯ ಅತ್ಯಂತ ಪ್ರತಿಷ್ಠಿತ ಕಣವಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಗೋರಖ್ಪುರ ವಿಧಾನ ಸಭಾ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ಸಮಾಜವಾದಿ ಪಾರ್ಟಿ ಅಂತಿಮಗೊಳಿಸಿದೆ.
ಉತ್ತರ ಪ್ರದೇಶ ಬಿಜೆಪಿಯ ಮಾಜಿ ಉಪಾಧ್ಯಕ್ಷ ದಿವಂಗತ ಉಪೇಂದ್ರ ದತ್ ಶುಕ್ಲಾರ ಪತ್ನಿ ಶುಭ್ವತಿ ಶುಕ್ಲಾರನ್ನು, ಗೋರಖ್ಪುರ (ನಗರ) ಕ್ಷೇತ್ರದಿಂದ ಎಸ್ಪಿ ತನ್ನ ಅಭ್ಯರ್ಥಿಯಾಗಿ ಯೋಗಿ ಆದಿತ್ಯನಾಥರ ವಿರುದ್ಧ ಅಖಾಡಕ್ಕೆ ಇಳಿಸಿದೆ.
BIG NEWS: ಸಿ.ಎಂ. ಇಬ್ರಾಹಿಂ ಧೂಳು ಸಹ ಬಿಜೆಪಿಗೆ ಬರಲು ಬಿಡಲ್ಲ; ರಾಷ್ಟ್ರವಾದಿ ಮುಸ್ಲಿಂರನ್ನು ಮಾತ್ರ BJPಗೆ ಸೇರಿಸಿಕೊಳ್ತೀವಿ; ಸಚಿವ ಈಶ್ವರಪ್ಪ ವಾಗ್ದಾಳಿ
ಜನವರಿ 20ರಂದು ಅಧಿಕೃತವಾಗಿ ಎಸ್ಪಿ ಸೇರಿದ್ದ ಶುಭ್ವತಿ ಶುಕ್ಲಾ, ಪೂರ್ವಾಂಚಲದಲ್ಲಿ ಖ್ಯಾತನಾಮರಾಗಿದ್ದ ಬ್ರಾಹ್ಮಣ ನಾಯಕ ಉಪೇಂದ್ರ ದತ್ ಶುಕ್ಲಾರ ವರ್ಚಸ್ಸಿನ ಮೇಲೆ ಕಣಕ್ಕಿಳಿದಿದ್ದಾರೆ ಎನ್ನಲಾಗಿದೆ. 2018ರಲ್ಲಿ ಯೋಗಿ ರಾಜೀನಾಮೆಯಿಂದ ತೆರವಾಗಿದ್ದ ಗೋರಖ್ಪುರ ಲೋಕಸಭಾ ಕ್ಷೇತ್ರದಲ್ಲಿ ಸೆಣಸಿ ಸೋಲು ಕಂಡಿದ್ದ ಉಪೇಂದ್ರ 2020ರಲ್ಲಿ ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದಾರೆ.
ಆ ವೇಳೆ ನಿಶದ್ ಪಕ್ಷದ ಪ್ರವೀಣ್ ನಿಶದ್ ಎಸ್‌ಪಿ ಟಿಕೆಟ್‌ನಿಂದ ಸ್ಫರ್ಧಿಸಿ ಯೋಗಿರ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದರು. ಈ ಬಾರಿ ಬಿಜೆಪಿಯ ಸಖ್ಯ ಬೆಳೆಸಿರುವ ನಿಶದ್ ಪಕ್ಷದಿಂದ ಪ್ರವೀಣ್ ಇಲ್ಲಿನ ಖಲೀಲಾಬಾದ್‌ನ ಸಂಸದರಾಗಿದ್ದಾರೆ.