ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ಇದೀಗ ಪೊಲೀಸ್ ಉನ್ನತಾಧಿಕಾರಿಗಳಿಗೂ ಸೋಂಕು ಹರಡಿದೆ.
ಓಂ ಶಕ್ತಿ ದೇವಾಲಯದಿಂದ ವಾಪಸ್ ಆಗಿರುವ ನೂರಾರು ಯಾತ್ರಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಜಿಲ್ಲೆಯಾದ್ಯಂತ ಆತಂಕ ಎದುರಾಗಿತ್ತು. ಇದರ ನಡುವೆಯೇ ಈಗ ಮಂಡ್ಯ ಎಸ್ ಪಿ ಯತೀಶ್, ಎ ಎಸ್ ಪಿ ಧನಂಜಯ್, ಮಂಡ್ಯ ಡಿವೈ ಎಸ್ ಪಿ ಮಂಜುನಾಥ್, ಮಳವಳ್ಳಿ ಡಿವೈ ಎಸ್ ಪಿ, ನಾಗಮಂಗಲ ಗ್ರಾಮಾಂತರ ಸಿಪಿಐ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತ ಪೊಲೀಸ್ ಅಧಿಕಾರಿಗಳು ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳಿಗೆ ಕೋವಿಡ್ ಆತಂಕ ಎದುರಾಗಿದೆ. ಇತ್ತೀಚೆಗೆ ಮಂಡ್ಯದ ಡಿ ಎ ಆರ್ ಆವರಣದಲ್ಲಿ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಹಾಗೂ ನಂತರ ನಡೆದ ಯುವಜನೋತ್ಸವ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಗಳಲ್ಲಿ ಇದೀಗ ಕೊರೊನಾ ಪಾಸಿಟಿವ್ ಬಂದಿದ್ದು, ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.