ಮಾಂಸಹಾರಿಗಳಿಗೆ ಸಾಕಷ್ಟು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಸಿಗುತ್ತದೆ. ಅವರು ಕೋಳಿ, ಮೀನು, ಹಂದಿ ಮಾಂಸದಿಂದ ಈ ಪೋಷಕಾಂಶಗಳನ್ನು ಪಡೆಯುತ್ತಾರೆ. ಮಾಂಸಹಾರಿಗಳಿಗೆ ಹೋಲಿಕೆ ಮಾಡಿದ್ರೆ ಸಸ್ಯಹಾರಿಗಳಿಗೆ ಈ ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆ ಎನ್ನುವ ಮಾತಿದೆ. ಆದ್ರೆ ಸಸ್ಯಹಾರಿಗಳಿಗೆ ಮಾಂಸಹಾರ ಸೇವನೆ ಮಾಡಲು ಸಾಧ್ಯವಿಲ್ಲ. ಅಂತವರು ಸಸ್ಯಹಾರದಲ್ಲಿಯೇ ಕೆಲ ಆಯ್ಕೆಗಳನ್ನು ಹುಡುಕಿಕೊಳ್ಳಬೇಕು. ನೀವು ನಾನ್ ವೆಜ್ ನಲ್ಲಿ ಸಿಗುವಷ್ಟೇ ಪೋಷಕಾಂಶವನ್ನು ಬಯಸಿದ್ರೆ ಸೋಯಾಬೀನ್ ಸೇವನೆಗೆ ಪ್ರಾಮುಖ್ಯತೆ ನೀಡಿ.
ಸೋಯಾಬೀನ್ ನಲ್ಲಿ ಪೋಷಕಾಂಶಗಳು ಕಂಡುಬರುತ್ತವೆ. ಸೋಯಾಬೀನ್ ಪ್ರೋಟೀನ್, ವಿಟಮಿನ್ ಬಿ6, ಬಿ12, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಗಳ ನಿಧಿಯಾಗಿದೆ. ಇದರಲ್ಲಿ ಕಬ್ಬಿಣಾಂಶವೂ ಹೇರಳವಾಗಿ ಕಂಡುಬರುತ್ತದೆ.
ಸೋಯಾಬೀನ್ ಸೇವನೆಯಿಂದ ಆಗುವ ಲಾಭಗಳು :
- ಸೋಯಾಬೀನ್ ಜೀವಕೋಶಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುತ್ತದೆ.
- ಸೋಯಾಬೀನ್‌ನಲ್ಲಿ ಆಂಟಿ-ಆಕ್ಸಿಡೆಂಟ್ ಕಂಡುಬರುತ್ತವೆ. ಕ್ಯಾನ್ಸರ್ ತಡೆಗೆ ಇದು ಸಹಕಾರಿ.
- ಹೃದಯದ ಆರೋಗ್ಯ ಸುಧಾರಿಸಿಕೊಳ್ಳಲು ಬಯಸುವವರು ಇದರ ಸೇವನೆ ಮಾಡಬೇಕು. ಹೃದ್ರೋಗದ ಅಪಾಯವನ್ನು ಸೋಯಾಬೀನ್ ಕಡಿಮೆ ಮಾಡುತ್ತದೆ.
- ಮಾನಸಿಕ ಸಮತೋಲನ ಇದ್ರಿಂದ ಸುಧಾರಿಸುತ್ತದೆ. ಮೆದುಳು ಹೆಚ್ಚು ವೇಗವಾಗಿ ಕೆಲಸ ಮಾಡಲು ಇದು ನೆರವಾಗುತ್ತದೆ.
- ನಿಮ್ಮ ಮೂಳೆಗಳು ಇದ್ರಿಂದ ಬಲ ಪಡೆಯುತ್ತವೆ.
- ಚಯಾಪಚಯವನ್ನು ಸುಧಾರಿಸುವ ಕೆಲಸ ಸೋಯಾಬೀನ್ ನಿಂದ ಆಗುತ್ತದೆ.
- ದೈಹಿಕ ದೌರ್ಬಲ್ಯ ಕಡಿಮೆ ಮಾಡಿ ಶಕ್ತಿ ನೀಡುತ್ತದೆ.
- ನಿಮ್ಮ ಕೂದಲು ಹಾಗೂ ತ್ವಚೆ ಆರೈಕೆಗೂ ಇದು ಒಳ್ಳೆಯದು.
- ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಸೋಯಾಬೀನ್ ಪ್ರಮುಖ ಪಾತ್ರವಹಿಸುತ್ತದೆ.