alex Certify ಸೌಂದರ್ಯ ರಕ್ಷಣೆಗೂ ಸಹಕಾರಿʼಹಾಗಲಕಾಯಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯ ರಕ್ಷಣೆಗೂ ಸಹಕಾರಿʼಹಾಗಲಕಾಯಿʼ

ಹಾಗಲಕಾಯಿ ಎಂದರೆ ಮುಖ ಕಿವುಚುವವರೇ ಜಾಸ್ತಿ. ಇದನ್ನು ತಿಂದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ ಎಂದು ಹೇಳಲಾಗುತ್ತದೆ.

ಆದರೆ ಕಹಿಯಾದ ಈ ಹಾಗಲಕಾಯಿ ಮುಖದ ಸೌಂದರ್ಯಕ್ಕೂ ತನ್ನದೇ ಆದ ಕೊಡುಗೆ ನೀಡಿದೆ. ಹಾಗಲಕಾಯಿಂದ ಹೊಳೆಯುವ ಮುಖದ ಚರ್ಮ ಹೇಗೆ ಪಡೆಯಬಹುದು ಅಂತ ತಿಳಿಯಿರಿ.

* ಹಾಗಲಕಾಯಿಯ ತುಂಡುಗಳನ್ನು ರುಬ್ಬಿ ಪೇಸ್ಟ್‌ ಮಾಡಿ. ಇದಕ್ಕೆ ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಲೋಳೆಸರದ ರಸ ಹಾಕಿ ಮಿಶ್ರ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆದರೆ ತುರಿಕೆ ಕಡಿಮೆಯಾಗುತ್ತದೆ.

* ಹಾಗಲಕಾಯಿ ಜ್ಯೂಸ್‌ ಅನ್ನು ಮುಖಕ್ಕೆ ಸವರಿಕೊಳ್ಳಿ. ಐದು ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಪ್ರತಿ ಎರಡು ದಿನಕ್ಕೊಮ್ಮೆ ಹೀಗೆ ಮಾಡಿದರೆ ಹೊಳೆಯುವ ಚರ್ಮ ಪಡೆಯಬಹುದು.

* ಸೆಕೆ ಗುಳ್ಳೆ, ಬೊಕ್ಕೆಗಳ ನಿವಾರಣೆಗೆ ಸ್ವಲ್ಪ ಹಾಗಲಕಾಯಿಯ ತುಂಡುಗಳನ್ನು ನೀರಿನಲ್ಲಿ ಬೇಯಿಸಿ. ನೀರು ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗುವಾಗ ಕುದಿಸುವುದನ್ನು ನಿಲ್ಲಿಸಿ, ನೀರು ತಣ್ಣಗಾಗಲು ಬಿಡಿ. ಈ ನೀರಿನಲ್ಲಿ ಹತ್ತಿ ಉಂಡೆಯನ್ನು ಅದ್ದಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...