
ಸೋಯಾಬೀನ್, ಪ್ರೋಟಿನ್ ನ ಅತ್ಯುತ್ತಮ ಮೂಲ ಎನ್ನಲಾಗುತ್ತದೆ. ಇದ್ರಲ್ಲಿ ದೇಹಕ್ಕೆ ಬೇಕಾದ ಅನೇಕ ಪೌಷ್ಟಿಕಾಂಶವಿದೆ. ಆದ್ರೆ ಸೋಯಾ, ಪುರುಷರ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೋಯಾ ಸೇವನೆಯು ಪುರುಷರ ಲೈಂಗಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ಕೆಲವು ತಜ್ಞರು ಇದನ್ನು ಒಪ್ಪುವುದಿಲ್ಲ. ಇತ್ತೀಚಿಗೆ ಇದ್ರ ಬಗ್ಗೆ ಚರ್ಚೆ ನಡೆಯುತ್ತಿದೆ.
ಕೆಲವು ತಜ್ಞರು, ಸೋಯಾ ವಿಶೇಷ ಪಾಲಿಫಿನಾಲ್ ಗಳಿಂದ ಸಮೃದ್ಧವಾಗಿದೆ. ಇದರಲ್ಲಿರುವ ಫೈಟೊಈಸ್ಟ್ರೊಜೆನ್ ಪುರುಷರ ಲೈಂಗಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಇದನ್ನು ಪುರುಷರು ಸೇವಿಸಬಾರದು ಎಂದು ಹೇಳುತ್ತಾರೆ.
ಥಟ್ಟಂತ ಮಾಡಿ ರುಚಿಕರ ರವಾ ವಡೆ
ಕೆಲವು ಸಂಶೋಧನೆಗಳ ಪ್ರಕಾರ, ಸೋಯಾದಲ್ಲಿರುವ ಐಸೊಫ್ಲಾವೋನ್ಸ್ ಮತ್ತು ಈಸ್ಟ್ರೊಜೆನ್ ಕಾರ್ಯವಿಧಾನಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಐಸೊಫ್ಲಾವೋನ್ ಗಳ ಸೇವನೆಯಿಂದ ಪುರುಷ ಲೈಂಗಿಕ ಫಲವತ್ತತೆ ಹೆಚ್ಚುತ್ತದೆ ಎಂದಿವೆ. ಆದ್ರೆ 2008 ರ ಕ್ರಾಸ್ ಸೆಕ್ಷನಲ್ ಅಧ್ಯಯನದಲ್ಲಿ, ಹೆಚ್ಚಿನ ಸೋಯಾ ಸೇವನೆಯು ಪುರುಷರಲ್ಲಿ ವೀರ್ಯ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ ಎಂದಿದೆ.
2015 ರಲ್ಲಿ ಅದೇ ಸಂಶೋಧನಾ ಗುಂಪು ಮತ್ತೊಂದು ಡೇಟಾವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸಂಶೋಧಕರು, ಸೋಯಾ ಸೇವನೆ ಹಾಗೂ ಪುರುಷ ಫಲವತ್ತತೆ ಜೊತೆ ಲಿಂಕ್ ಮಾಡಲು ಸಾಧ್ಯವಾಗಲಿಲ್ಲ. ಎರಡು ತಿಂಗಳ ಕಾಲ ಪ್ರತಿದಿನ 40 ಗ್ರಾಂ ಸೋಯಾವನ್ನು ಸೇವಿಸುವ ಆರೋಗ್ಯವಂತ ಪುರುಷರ ವೀರ್ಯದ ಗುಣಮಟ್ಟದಲ್ಲಿ ಯಾವುದೇ ಕೆಟ್ಟ ಪರಿಣಾಮವಾಗಿಲ್ಲ ಎಂದು ಅಧ್ಯಯನವೊಂದು ಹೇಳಿದೆ. ತಜ್ಞರಲ್ಲಿಯೇ ಈ ಬಗ್ಗೆ ಸ್ಪಷ್ಟತೆ ಕಂಡು ಬರ್ತಿಲ್ಲ.
ಉದ್ಯೋಗಿಗಳಿಗೆ ವಿಶೇಷ ಗಿಫ್ಟ್ ನೀಡಲು ಸಂಪುಟದಲ್ಲಿ ನಿರ್ಧಾರ: ರೈಲ್ವೆ ಸಿಬ್ಬಂದಿಗೆ ಸಿಗಲಿದೆ 78 ದಿನಗಳ ವೇತನ ಬೋನಸ್
ಹೃದ್ರೋಗ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಂತಹ ಗಂಭೀರ ರೋಗಗಳನ್ನು ತಡೆಗಟ್ಟುವಲ್ಲಿ ಸೋಯಾಬೀನ್ ಸಹಕಾರಿ. ಸ್ನಾಯುವಿನ ಬಲಕ್ಕಾಗಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಉತ್ಕರ್ಷಣ ನಿರೋಧಕಗಳಾದ ಸಸ್ಯ ಪ್ರೋಟೀನ್ ಗಳು, ಅಮೈನೋ ಆಮ್ಲಗಳು, ಫೈಬರ್, ವಿಟಮಿನ್ ಗಳು, ಖನಿಜಗಳು ಮತ್ತು ಪಾಲಿಫಿನಾಲ್ ಗಳು, ಜೀವಕೋಶಗಳ ಹಾನಿಯನ್ನು ತಡೆಯುತ್ತದೆ.