
ಬಾಂಡ್‌ಗಳ ವಿತರಣೆಯ ದಿನಾಂಕವನ್ನು ಡಿಸೆಂಬರ್ 28, 2023 ಎಂದು ನಿಗದಿಪಡಿಸಲಾಗಿದೆ. ಇನ್ನು ಸಾವರಿನ್ ಗೋಲ್ಡ್ ಬಾಂಡ್ 2023-24 ರ ಸರಣಿ IV ಅನ್ನು ಫೆಬ್ರವರಿ 12 ರಿಂದ ಫೆಬ್ರವರಿ 16, 2024 ರವರೆಗೆ ಸಾರ್ವಜನಿಕ ಚಂದಾದಾರಿಕೆಗಾಗಿ ತೆರೆಯಲಾಗುತ್ತದೆ. ಬಾಂಡ್ ವಿತರಣೆಯ ದಿನಾಂಕವನ್ನು ಫೆಬ್ರವರಿ 21, 2024 ಎಂದು ನಿಗದಿಪಡಿಸಲಾಗಿದೆ.
“SGB ಗಳನ್ನು ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು (ಸಣ್ಣ ಹಣಕಾಸು ಬ್ಯಾಂಕುಗಳು, ಪಾವತಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ಕ್ಲಿಯರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (CCIL), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ವಿನಿಮಯ ಕೇಂದ್ರಗಳು ಅಂದರೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್ ಮೂಲಕ ಮಾರಾಟ ಮಾಡಲಾಗುತ್ತದೆ” ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಸಾವರಿನ್ ಗೋಲ್ಡ್ ಬಾಂಡ್‌ಗಳು ಯಾರು ಖರೀದಿಸಬಹುದು ?
ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀಡಲಾಗುವ SGB ಗಳನ್ನು ನಿವಾಸಿ ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು , ಟ್ರಸ್ಟ್ ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳಿಗೆ ಮಾರಾಟ ಮಾಡಬಹುದಾಗಿದೆ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ಹೂಡಿಕೆ ಮೊತ್ತಕ್ಕೆ ವರ್ಷಕ್ಕೆ ಶೇ. 2.5ರಷ್ಟು ಬಡ್ಡಿ ಕೊಡಲಾಗುತ್ತದೆ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ಮಾಡಲಾಗುವ ಹೂಡಿಕೆಗೆ ತೆರಿಗೆ ರಿಯಾಯಿತಿ ಪಡೆಯಬಹುದು.
ಕನಿಷ್ಠ ಹೂಡಿಕೆಯು ಒಂದು ಗ್ರಾಂ ಚಿನ್ನವಾಗಿರುತ್ತದೆ, ಆದರೆ ಚಂದಾದಾರಿಕೆಯ ಗರಿಷ್ಠ ಮಿತಿಯು ವ್ಯಕ್ತಿಗೆ ನಾಲ್ಕು ಕೆಜಿ, ಅವಿಭಕ್ತ ಕುಟುಂಬಕ್ಕೆ 4 ಕೆಜಿ ಮತ್ತು ಟ್ರಸ್ಟ್ ಗಳು ಮತ್ತು ವಿಶ್ವವಿದ್ಯಾಲಯಗಳಿಗೆ 20 ಕೆಜಿ ಆಗಿರುತ್ತದೆ.
ಗ್ರಾಹಕರು ಬಯಸಿದರೆ ಚಿನ್ನದ ಬಾಂಡ್ ಮೇಲೆ ಸಾಲ ಪಡೆಯಬಹುದು. ಇದರ ಬೆಲೆಯನ್ನು ಇಂಡಿಯನ್ ಬುಲೆಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ಲಿಮಿಟೆಡ್ (IBJA) ನಿಗದಿಪಡಿಸಿದೆ. IBJA ದರದ ಆಧಾರದ ಮೇಲೆ ಬಾಂಡ್ ಬೆಲೆಯನ್ನು ನಿರ್ಧರಿಸಲಾಗುತ್ತದೆ.