ಬೆಂಗಳೂರು: ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ 34 ರೈಲುಗಳಿಗೆ ಅಕ್ಟೋಬರ್ 4 ರಿಂದ 15 ರವರೆಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನಿರ್ಧರಿಸಿದೆ.
ಮೈಸೂರು -ಬೆಳಗಾವಿ ಎಕ್ಸ್ ಪ್ರೆಸ್, ಮೈಸೂರು –ಚಾಮರಾಜನಗರ, ಮೈಸೂರು -ಬಾಗಲಕೋಟೆ ಬಸವ ಎಕ್ಸ್ ಪ್ರೆಸ್, ಹುಬ್ಬಳ್ಳಿ -ಮೈಸೂರು ಹಂಪಿ ಎಕ್ಸ್ ಪ್ರೆಸ್, ಮೈಸೂರು -ಪಂಡರಾಪುರ ಗೋಲಗುಂಬಜ್ ಎಕ್ಸ್ ಪ್ರೆಸ್ ರೈಲುಗಳಿಗೆ ತಲಾ ಒಂದು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿ ಅಳವಡಿಸಲಾಗುವುದು.
ಮೈಸೂರು -ತಾಳಗುಪ್ಪ ಎಕ್ಸ್ ಪ್ರೆಸ್ ರೈಲುಗಳಿಗೆ ಎರಡು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುವುದು.
ಮೈಸೂರು -ಚಾಮರಾಜನಗರ ಪ್ಯಾಸೆಂಜರ್ ಸ್ಪೆಷಲ್, ತಾಳಗುಪ್ಪ -ಮೈಸೂರು ಕುವೆಂಪು ಎಕ್ಸ್ ಪ್ರೆಸ್, ಬೆಂಗಳೂರು -ಅರಸೀಕೆರೆ ಪ್ಯಾಸೆಂಜರ್, ಬೆಂಗಳೂರು -ಚನ್ನಪಟ್ಟಣ ಪ್ಯಾಸೆಂಜರ್ ಅರಸೀಕೆರೆ -ಮೈಸೂರು ಪ್ಯಾಸೆಂಜರ್ ರೈಲುಗಳಿಗೆ ತಲಾ ಒಂದು ಸಾಮಾನ್ಯ ದ್ವಿತೀಯ ದರ್ಜೆ ಹೆಚ್ಚುವರಿ ಹೋಗಿ ಜೋಡಿಸಲಾಗುವುದು.
ಮೈಸೂರು -ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್, ಶಿವಮೊಗ್ಗ ಟೌನ್ -ಚಿಕ್ಕಮಗಳೂರು ಪ್ಯಾಸೆಂಜರ್, ಚಿಕ್ಕಮಗಳೂರು -ಯಶವಂತಪುರ ಎಕ್ಸ್ ಪ್ರೆಸ್, ಮೈಸೂರು -ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್, ಎಸ್ಎಂವಿಟಿ ಬೆಂಗಳೂರು- ಕರೈಕಲ್ ಎಕ್ಸ್ ಪ್ರೆಸ್ ರೈಲುಗಳಿಗೆ ತಲಾ ಒಂದು ಸಾಮಾನ್ಯ ದ್ವಿತೀಯ ದರ್ಜೆ ಹೆಚ್ಚುವರಿ ಬೋಗಿ ಅಳವಡಿಸಲಾಗುವುದು ಎಂದು ಹೇಳಲಾಗಿದೆ.