
ಬೇರೆ ದೇಶದವರು ನಮ್ಮ ಭಾಷೆ, ಸಂಸತಿ, ಕಲೆಯನ್ನು ಅಳವಡಿಸಿಕೊಂಡಾಗ ಅಥವಾ ಅನುಸರಿಸಿದಾಗ ಸಹಜವಾಗಿ ಖುಷಿಯಾಗುತ್ತದೆ. ಇಲ್ಲೊಬ್ಬ ವಿದೇಶಿ ಮಹಿಳೆ ಭಾರತದ ಪ್ರಮುಖ ನೃತ್ಯ ಪ್ರಕಾರ ಕಲಿತು ಪ್ರದರ್ಶನ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣ ಕೊರಿಯಾದ ಮಹಿಳೆಯೊಬ್ಬರು ಸಮಾರಂಭವೊಂದರಲ್ಲಿ ಒಡಿಸ್ಸಿ ನೀಡಿ, ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಕ್ಲಿಪ್ ಅನ್ನು ಇಂಡಿಯನ್ ಕೊರಿಯನ್ ಎಂಬ ಪೇಜ್ ಹಂಚಿಕೊಂಡಿದೆ.
ದಕ್ಷಿಣ ಕೊರಿಯಾದ ಬೀನಾ ಕುಯೆಮ್ ಎಂಬಾಕೆ ಒಡಿಸ್ಸಿ ನೃತ್ಯವನ್ನು ಆಕರ್ಷಕವಾಗಿ ಪ್ರದಶಿರ್ಸಿದ್ದಾರೆ. ಸಾಂಪ್ರದಾಯಿಕ ನೃತ್ಯದ ಉಡುಪನ್ನು ಧರಿಸಿ ಸುಂದರವಾಗಿ ಹೆಜ್ಜೆ ಹಾಕಿದ್ದಾರೆ. ಅದೇ ವೇದಿಕೆಯಲ್ಲಿ ಬೀನಾ ಅವರೊಂದಿಗೆ ಕಥಕ್ ಪ್ರದರ್ಶಿಸಿದ ಭಾರತೀಯ ಮಹಿಳೆ ಕೂಡ ಸೇರಿಕೊಂಡರು.
“ಎರಡು ಸಂಸ್ಕೃತಿಗಳು ಭೇಟಿಯಾದಾಗ, ಅದಕ್ಕಿಂತ ಸುಂದರವಾದದ್ದು ಯಾವುದೂ ಇಲ್ಲ” ಎಂದು ಪೋಸ್ಟ್ನ ಶೀಷಿರ್ಕೆ ಇದೆ.
ಇದು 86ಕೆ ವೀಕ್ಷಣೆಗಳನ್ನು ಗಳಿಸಿದ್ದು, ನೆಟ್ಟಿಗರು ಸಾಕಷ್ಟು ಪ್ರಭಾವಿತರಾಗಿ, ಕಾಮೆಂಟ್ ಮಾಡಿ ಖುಷಿಪಟ್ಟಿದ್ದಾರೆ.