ಬೆಂಗಳೂರು: ಕರ್ನಾಟಕದಲ್ಲಿ 1,245 ಕೋಟಿ ರೂ. ಹೂಡಿಕೆ ಮಾಡುವುದಾಗಿ ದಕ್ಷಿಣ ಕೊರಿಯಾದ ಜಾಗತಿಕ ಮಟ್ಟದ ಟೂಲ್ಸ್ ತಯಾರಿಕಾ ಕಂಪನಿ ವೈಜಿ – 1 ಘೋಷಿಸಿದೆ.
ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವು ದಕ್ಷಿಣ ಕೊರಿಯಾಕ್ಕೆ ಐದು ದಿನಗಳ ಭೇಟಿ ಕೈಗೊಂಡಿದೆ.
ಕರ್ನಾಟಕದಲ್ಲಿ ಕೊರಿಯಾ ಭಾಷೆ, ಕಲಿಕಾ ಮತ್ತು ತರಬೇತಿ ಕೇಂದ್ರ ಸ್ಥಾಪನೆ, ಇಂಧನ – ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಾಧುನಿಕ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಕಂಪನಿಯ ಮುಖ್ಯಸ್ಥ ಹೊ ಕ್ಯೂನ್ ಸಾಂಗ್ ಅವರು ಹೇಳಿದ್ದಾರೆ.
ಗೇಮ್ ಇನ್ ಕಂಪನಿ ಕ್ರಾಫ್ಟನ್ ಇಂಕ್ ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ 1245 ಕೋಟಿ ರೂ. ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿಸಿದೆ.