![](https://kannadadunia.com/wp-content/uploads/2023/09/Screenshot-168.jpg)
ದಕ್ಷಿಣ ಕೊರಿಯಾ ರಾಯಭಾರ ಕಚೇರಿಯ ಅಧಿಕೃತ ಎಕ್ಸ್ ಪೇಜ್ನಿಂದ ಪೂಜಾ ಸಮಾರಂಭದ ವಿಡಿಯೋವನ್ನು ಶೇರ್ ಮಾಡಲಾಗಿದೆ.
ನೂತನ ಹ್ಯುಂಡೈ ಜೆನೆಸಿಸ್ ಜಿವಿ 80 ಭಾರತದಲ್ಲಿ ದಕ್ಷಿಣ ಕೊರಿಯಾದ ಅಧಿಕೃತ ವಾಹನವಾಗಿ ಇರೋದಕ್ಕೆ ನಾವು ಸಂತೋಷ ವ್ಯಕ್ತಪಡಿಸುತ್ತಿದ್ದೇವೆ. ಅಲ್ಲದೇ ಈ ಶುಭ ಸಮಾರಂಭದಲ್ಲಿ ನಾವು ಪೂಜಾ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ನಮ್ಮ ರಾಯಭಾರ ಕಚೇರಿಯ ಹೊಸ ಪಯಣದಲ್ಲಿ ನೀವು ಜೊತೆಯಾಗಿ ಅಂತಾ ಕೊರಿಯನ್ ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ.
ವಿಡಿಯೋದಲ್ಲಿ ಪುರೋಹಿತರು ಪೂಜಾ ವಿಧಿ ವಿಧಾನಗಳನ್ನ ನಡೆಸುತ್ತಿರೋದನ್ನ ಕಾಣಬಹುದಾಗಿದೆ. ಅಲ್ಲದೇ ಈ ಪೂಜಾ ಕಾರ್ಯಕ್ರಮದಲ್ಲಿ ಚಾಂಗ್ ಜೇ ಬೋಕ್ ಸೇರಿದಂತೆ ಅನೇಕ ಅಧಿಕಾರಿಗಳು ಸಹ ಹಾಜರಿದ್ದಾರೆ. ಸನಾತನ ಧರ್ಮದ ಆಚರಣೆಗಳನ್ನು ಗೌರವಿಸಿದ ದಕ್ಷಿಣ ಕೊರಿಯಾ ರಾಯಭಾರ ಕಚೇರಿಗೆ ಹಿಂದೂ ಪರರು ಧನ್ಯವಾದ ಅರ್ಪಿಸುತ್ತಿದ್ದಾರೆ.