ಕೊರೊನಾ ವೈರಸ್ ರೂಪಾಂತರ ಒಮಿಕ್ರಾನ್ ದೊಡ್ಡ ಚಿಂತೆಗೆ ಕಾರಣವಾಗಿದೆ. ಕೊರೊನಾ ಎರಡನೇ ಅಲೆ ನಂತ್ರ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದ ಜನರಿಗೆ ಒಮಿಕ್ರಾನ್ ಈಗ ಭಯ ಹುಟ್ಟಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡು ಒಮಿಕ್ರಾನ್ ಈಗ ಬೆಂಗಳೂರಿಗೆ ಬಂದಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾ ಪರಿಸ್ಥಿತಿ ಚಿಂತಾಜನಕವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಒಂದೇ ದಿನ ಒಮಿಕ್ರಾನ್ ಪ್ರಕರಣ ದ್ವಿಗುಣಗೊಂಡಿದೆ.
BIG NEWS: ‘ಒಮಿಕ್ರಾನ್’ ತಳಿ ಪತ್ತೆ ಹಿನ್ನಲೆಯಲ್ಲಿ ಸಿಎಂ ಮಹತ್ವದ ಹೇಳಿಕೆ
ಒಮಿಕ್ರಾನ್ ಪ್ರಕರಣ ಹೆಚ್ಚಾಗ್ತಿದ್ದಂತೆ ದಕ್ಷಿಣ ಆಫ್ರಿಕಾದಲ್ಲಿ ಲೆವೆಲ್ ಒನ್ ಲಾಕ್ ಡೌನ್ ಜಾರಿಯಾಗಿದೆ. ಸೋಂಕಿನ ನಿಯಂತ್ರಣಕ್ಕೆ ಮಾರುಕಟ್ಟೆಗಳು ಬಂದ್ ಆಗಿವೆ. ಜನರಿಗೆ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಒಟ್ಟು 5 ವರ್ಗಗಳ ಲಾಕ್ಡೌನ್ಗಳನ್ನು ವಿಧಿಸುವ ಸಾಧ್ಯತೆಯಿದೆ.
ಇದೀಗ ದಕ್ಷಿಣ ಆಫ್ರಿಕಾದಲ್ಲಿ ಒಂದನೇ ಹಂತದ ಲಾಕ್ಡೌನ್ ವಿಧಿಸಲಾಗಿದೆ. ಇದರಿಂದಾಗಿ ವ್ಯಾಪಾರಿಗಳಿಗೆ ಭಾರಿ ನಷ್ಟವಾಗ್ತಿದೆ. ಒಮಿಕ್ರಾನ್ ಮೊದಲ ಪ್ರಕರಣ ನವೆಂಬರ್ 24 ರಂದು ದಾಖಲಾಗಿತ್ತು. ಅಲ್ಲಿಂದೀಚೆಗೆ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್ನ ಹೊಸ ಪ್ರಕರಣಗಳಲ್ಲಿ ತ್ವರಿತ ಹೆಚ್ಚಳ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ, ದಕ್ಷಿಣ ಆಫ್ರಿಕಾದಲ್ಲಿ 11535 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಈ ಅವಧಿಯಲ್ಲಿ 44 ಜನರು ಸಾವನ್ನಪ್ಪಿದ್ದಾರೆ. ಡಿಸೆಂಬರ್ 2 ರಂದು 24 ಗಂಟೆಗಳಲ್ಲಿ 8561 ಹೊಸ ಪ್ರಕರಣಗಳು ದಾಖಲಾಗಿದ್ದವು, 28 ಜನರು ಸಾವನ್ನಪ್ಪಿದ್ದರು.
ಅಂಕಿಅಂಶಗಳ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ 29 ಲಕ್ಷದ 88 ಸಾವಿರದ 148 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರೆ, ಇದುವರೆಗೆ 89 ಸಾವಿರದ 915 ಜನರು ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ.