
ಇಂದು ವಿಶ್ವ ಕಪ್ ನ ಎರಡು ಪಂದ್ಯಗಳಿದ್ದು, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡದ ನಡುವಣ ಪಂದ್ಯ ಈಗಾಗಲೇ ಆರಂಭವಾಗಿದೆ. ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಮುಖಾಮುಖಿಯಾಗುತ್ತಿವೆ. ದಕ್ಷಿಣ ಆಫ್ರಿಕಾ ಬಲಿಷ್ಠ ತಂಡವನ್ನು ಹೊಂದಿದ್ದು ಈ ಬಾರಿಯಾದರೂ ತಮ್ಮ ಜೋಕರ್ಸ್ ಪಟ್ಟದಿಂದ ಹೊರಬರಲಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರತಿ ವಿಶ್ವಕಪ್ ನಲ್ಲೂ ಬಲಿಷ್ಠ ತಂಡವನ್ನೇ ಹೊಂದಿದ್ದರು ಸೆಮಿ ಫೈನಲ್ ಹಾಗೂ ಫೈನಲ್ ಹಂತಕ್ಕೆ ಬಂದು ಸೋಲನುಭವಿಸಿರುವುದನ್ನು ನಾವು ನೋಡಿದ್ದೇವೆ. ಮತ್ತೊಂದೆಡೆ ಶ್ರೀಲಂಕಾ ತಂಡದಲ್ಲಿ ಸ್ಪಿನ್ನರ್ ಗಳೆ ಅಸ್ತ್ರವಾಗಿದ್ದು, ವಹಿಂದು ಹಸರಂಗ ತಂಡದಲ್ಲಿಲ್ಲದೆ ಇರುವುದು ಶ್ರೀಲಂಕಾ ಅಭಿಮಾನಿಗಳಲ್ಲಿ ಬೇಸರ ತಂದಿದೆ.
ದಕ್ಷಿಣ ಆಫ್ರಿಕಾ ತಂಡದ ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್, ಐಡೆನ್ ಮಾರ್ಕ್ರಾಮ್ ಅವರಿಗೆ ಭಾರತದ ಪಿಚ್ಚಿನಲ್ಲಿ ಆಡಿರುವ ಸಾಕಷ್ಟು ಅನುಭವವಿದ್ದು ಇಂದು ರನ್ ಹೊಳೆ ಹರಿದು ಬರುವ ಸಾಧ್ಯತೆ ಹೆಚ್ಚಿದೆ.