ʼಆರ್‌ಆರ್‌ಆರ್ʼ ಸಿನೆಮಾದ ಯಶಸ್ಸಿನೊಂದಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ನಟ ಜೂನಿಯರ್ ಎನ್‌ಟಿಆರ್. ಈಗ ಬಾಲಿವುಡ್‌ನಲ್ಲಿ ಚೊಚ್ಚಲ ಚಿತ್ರದ ತಯಾರಿ ನಡೆಸುತ್ತಿದ್ದಾರೆ. ಹೃತಿಕ್ ರೋಷನ್ ಜೊತೆ ಜೂನಿಯರ್ ಎನ್‌ಟಿಆರ್ ವಾರ್-2 ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜೂನಿಯರ್ ಎನ್‌ಟಿಆರ್ ದಕ್ಷಿಣ ಭಾರತದ ಸಿನೆಮಾ ಇಂಡಸ್ಟ್ರಿಯ ಅತ್ಯಂತ ದುಬಾರಿ ಸ್ಟಾರ್‌ಗಳಲ್ಲಿ ಒಬ್ಬರು. ಈಗ ತಮ್ಮ ಚೊಚ್ಚಲ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ವಿಶಿಷ್ಟ ದಾಖಲೆಯನ್ನು ಸೃಷ್ಟಿಸಲಿದ್ದಾರೆ. ಅವರು ತಮ್ಮ ಮೊದಲ ಹಿಂದಿ ಚಿತ್ರಕ್ಕೆ ಪಡೆಯುತ್ತಿರುವ ಶುಲ್ಕ ಬಾಲಿವುಡ್‌ನ ಫೇಮಸ್ ನಟರಿಗೂ ಸಿಗುತ್ತಿಲ್ಲ. ಜೂನಿಯರ್ ಎನ್‌ಟಿಆರ್ ತಮ್ಮ ಮೊದಲ ಹಿಂದಿ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಈ ಚಿತ್ರವನ್ನು ಯಶ್ ರಾಜ್ ಫಿಲಂಸ್ ನಿರ್ಮಿಸುತ್ತಿದೆ.
ಜೂನಿಯರ್ ಎನ್‌ಟಿಆರ್, ವಾರ್ 2 ಚಿತ್ರಕ್ಕೆ ಸುಮಾರು ಐವತ್ತು ಕೋಟಿ ರೂಪಾಯಿಗಳ ಸಂಭಾವನೆ ಪಡೆಯಲಿದ್ದಾರಂತೆ. ಚಿತ್ರ ನಿರ್ಮಾಣದ ಹೊಣೆ ಹೊತ್ತಿರುವ ಯಶ್ ರಾಜ್ ಫಿಲಂಸ್ ಜೂನಿಯರ್ ಎನ್‌ಟಿಆರ್ ಅವರ ಸಂಭಾವನೆಯ ಷರತ್ತಿಗೆ ಒಪ್ಪಿಕೊಂಡಿದೆಯಂತೆ. ವಾರ್ 2 ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಾರ್ ಚಿತ್ರದ ಇನ್ನಷ್ಟು ಸರಣಿಗಳು ಕೂಡ ಬರಲಿವೆಯಂತೆ. ಅದರ ಕಥೆಯು ಕೆಲವು ಧೂಮ್ ಸರಣಿಯ ಚಲನಚಿತ್ರಗಳಂತೆಯೇ ಇರಲಿದೆ. ಹೃತಿಕ್ ರೋಷನ್ ಇದರಲ್ಲಿ ಖಾಯಂ ಆಗಿ ಉಳಿಯಲಿದ್ದು, ವಿಲನ್‌ಗಳ ಚಹರೆ ಬದಲಾಗಲಿದೆ.
ವಾರ್ 2 ನಲ್ಲಿ ಜೂನಿಯರ್ ಎನ್‌ಟಿಆರ್ ಪಾತ್ರವು ಸಾಕಷ್ಟು ನಿಗೂಢವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ ಇತ್ತೀಚೆಗೆ ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿಯಾಗಿ ಚಿತ್ರದ ಬಗ್ಗೆ ಮತ್ತು ಅವರ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರಂತೆ. ಶೀಘ್ರದಲ್ಲೇ ದಕ್ಷಿಣದಲ್ಲಿ ಜೂನಿಯರ್ ಎನ್‌ಟಿಆರ್ ನಟನೆಯ ʼದೇವಾರಾʼ ಚಿತ್ರ ರಿಲೀಸ್ ಆಗಲಿದೆ.
ಈ ಮಧ್ಯೆ ಬಾಲಿವುಡ್‌ನ ಇತರ ಕೆಲವು ನಿರ್ಮಾಪಕರು ಕೂಡ ಜೂನಿಯರ್ ಎನ್‌ಟಿಆರ್ ಅವರನ್ನು ತಮ್ಮ ಚಿತ್ರಗಳಲ್ಲಿ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗ್ತಾ ಇದೆ.