ದಕ್ಷಿಣ ಭಾರತದ ಖ್ಯಾತ ಹಾಸ್ಯನಟ ಮನೋಬಾಲಾ ಇನ್ನಿಲ್ಲ…..! 03-05-2023 3:31PM IST / No Comments / Posted In: Latest News, India, Live News ದಕ್ಷಿಣ ಭಾರತ ಚಲನಚಿತ್ರರಂಗದ ಜನಪ್ರಿಯ ಹಾಸ್ಯನಟ, ನಿರ್ದೇಶಕ ಮತ್ತು ನಿರ್ಮಾಪಕ ಮನೋಬಾಲಾ ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೇದೋಜೀರಕ ಗ್ರಂಥಿಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ನಿಕಟ ಮೂಲಗಳು ತಿಳಿಸಿವೆ. ಮನೋಬಾಲಾ ತಮಿಳು ಚಿತ್ರರಂಗದಲ್ಲಿನ ತಮ್ಮ ಕೆಲಸಕ್ಕಾಗಿ ತುಂಬಾ ಹೆಸರುವಾಸಿಯಾಗಿದ್ದರು. ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಘಟಾನುಘಟಿ ನಾಯಕರು ಸಂತಾಪ ಸೂಚಿಸಿದ್ದಾರೆ. “ಜನಪ್ರಿಯ ನಿರ್ದೇಶಕ, ನಟ ಮತ್ತು ನನ್ನ ಸ್ನೇಹಿತ ಮನೋಬಾಲಾ ಅವರ ನಿಧನದಿಂದ ನನಗೆ ದುಃಖವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸೂಪರ್ ಸ್ಟಾರ್ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ದಿಗ್ಗಜ ಚಿತ್ರನಿರ್ಮಾಪಕ ಭಾರತಿರಾಜ, ”ನನ್ನ ವಿದ್ಯಾರ್ಥಿನಿ ಮನೋಬಾಲಾ ಅವರ ಸಾವು ನನಗೆ ಮತ್ತು ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಎಂದಿದ್ದಾರೆ. ಪೊನ್ನಿಯಿನ್ ಸೆಲ್ವನ್ ಸ್ಟಾರ್ ಕಾರ್ತಿ ಟ್ವೀಟ್ ಮಾಡಿ, “”ಈ ಸುದ್ದಿ ಕೇಳಿ ತುಂಬಾ ಆಘಾತವಾಗಿದೆ. ಎಲ್ಲೆಡೆ ಮತ್ತು ಎಲ್ಲರಿಗೂ ಇರಬಹುದಾದ ವ್ಯಕ್ತಿ. ಮಿಸ್ ಯು ಮನೋಬಾಲಾ ಸರ್.” ಎಂದಿದ್ದಾರೆ. ಮನೋಬಾಲಾ ಅವರ ವಿಶಿಷ್ಟ ಧ್ವನಿ ಮತ್ತು ಹಾಸ್ಯಪ್ರಜ್ಞೆ ಪ್ರೇಕ್ಷಕರನ್ನು ರಂಜಿಸಿತ್ತು. ಹೆಸರಾಂತ ಚಲನಚಿತ್ರ ನಿರ್ದೇಶಕ ಭಾರತಿರಾಜ ಅವರ ಸಹಾಯಕರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ಮನೋಬಾಲಾ ಅವರು ಸುಮಾರು 700 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 40 ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು ಕೆಲವು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಸೇತು, ಪಿತಾಮಗನ್, ಊರ್ಕಾವಲನ್, ಕಾಟ್ರಿನ್ ಮೋಝಿ ಮತ್ತು ಚಕ್ರ ಅವರ ಸ್ಮರಣೀಯ ಚಿತ್ರಗಳು. ಚೆನ್ನೈನ ಪ್ರಸಾದ್ ಲ್ಯಾಬ್ ಬಳಿ ಇರುವ ಅವರ ಮನೆಯಲ್ಲಿ ಮನೋಬಾಲಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. பிரபல இயக்குநரும், நடிகருமான, அருமை நண்பர் மனோபாலாவுடைய இறப்பு எனக்கு மிகவும் வேதனை அளிக்கிறது. அவருடைய குடும்பத்தினருக்கு என்னுடைய அனுதாபங்கள். அவரது ஆத்மா சாந்தியடையட்டும்.@manobalam — Rajinikanth (@rajinikanth) May 3, 2023 Extremely shocked to hear this news. A man who can be everywhere and for everyone. Miss you Manobala sir. #RIP — Karthi (@Karthi_Offl) May 3, 2023