ಕೋಲ್ಕತ್ತಾದ ಡೈಮಂಡ್ ಹಾರ್ಬರ್ ರಸ್ತೆಯಲ್ಲಿ ಸೌರವ್ ಗಂಗೂಲಿ ಅವರ ಪುತ್ರಿ ಸನಾ ಗಂಗೂಲಿ ಅವರ ಕಾರ್ ಗೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೋಲ್ಕತ್ತಾದಿಂದ ರಾಯಚಕ್ ಬಸ್ ಬೆಹಲಾ ಚೌರಸ್ತಾ ಪ್ರದೇಶದಲ್ಲಿ ಹಿಂಬದಿಯಿಂದ ಸನಾ ಅವರ ಕಾರಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ. ಸನಾ ಕಾರಿನೊಳಗೆ ಇದ್ದರು. ಮತ್ತು ಚಾಲಕ ಕಾರ್ ಚಲಾಯಿಸುತ್ತಿದ್ದ. ಅಪಘಾತದ ನಂತರ ವೇಗವಾಗಿ ಚಲಿಸುತ್ತಿದ್ದ ಬಸ್ ಅನ್ನು ಸನಾ ಚಾಲಕ ಬೆನ್ನಟ್ಟಿದ್ದಾನೆ. ಸಖೇರ್ ಬಜಾರ್ ಬಳಿ ಬಸ್ ನಿಲ್ಲಿಸಲಾಗಿದ್ದು, ಸನಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಮೂಲಗಳ ಪ್ರಕಾರ, ಬಸ್ ಡಿಕ್ಕಿಯಿಂದ ಸನಾ ಅವರ ಕಾರಿಗೆ ಸಣ್ಣಪುಟ್ಟ ಹಾನಿಯಾಗಿದೆ. ಆದರೆ, ಆಕೆಯಿಂದ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.