alex Certify ಕಾಪಿ ಪೇಸ್ಟ್​ ಮಾಡಿ ಟ್ರೋಲ್​ ಗೊಳಗಾದ ಗಂಗೂಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಪಿ ಪೇಸ್ಟ್​ ಮಾಡಿ ಟ್ರೋಲ್​ ಗೊಳಗಾದ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಮತ್ತು ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ ಕಾಪಿ-ಪೇಸ್ಟ್​ ತಪ್ಪಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗಿದ್ದಾರೆ.

ಇ ಕಾಮರ್ಸ್​ ಪ್ಲಾಟ್​ಫಾರ್ಮ್ ಮೀಶೋ ಅವರ ಪ್ರಚಾರ ಅಭಿಯಾನದ ಭಾಗವಾಗಿ ನಟಿ ದೀಪಿಕಾ ಪಡುಕೋಣೆ, ಕಾರ್ತಿ ಮತ್ತು ರಶ್ಮಿಕಾ ಮಂದಣ್ಣ, ಹಾಸ್ಯನಟ ಕಪಿಲ್​ ಶರ್ಮಾ ಮತ್ತು ಕ್ರಿಕೆಟಿಗ ರೋಹಿತ್​ ಶರ್ಮಾ ಸೇರಿದಂತೆ ಹಲವಾರು ಖ್ಯಾತನಾಮರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟರ್​ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅದು ಅವರೆಲ್ಲರೂ ನಟಿಸಿದ ಟ್ರೈಲರ್​ ಒಂದರ ಬಿಡುಗಡೆಗೆ ಸಂಬಂಧಿಸಿದ ಸಂದೇಶ ಇತ್ತು.

ಗಂಗೂಲಿಯ ಜಾಲತಾಣದಲ್ಲಿ ಪಿಆರ್​ ಟೀಮ್​ ಕಳಿಸಿದ ಮಾಹಿತಿಯನ್ನು ಒಳಗೊಂಡ ಸಂದೇಶ ಪೋಸ್ಟ್​ ಮಾಡಲಾಗಿತ್ತು. ಆದರೆ, ತಕ್ಷಣವೇ ಅರಿವಾಗಿ ಡಿಲೀಟ್​ ಮಾಡಲಾಯಿತು. ಅಷ್ಟರೊಳಗ ಸ್ಕ್ರೀನ್​ ಶಾಟ್​ ತೆಗೆದುಕೊಂಡವರು ಅದನ್ನು ಜಾಲತಾಣದಲ್ಲಿ ಹರಿಯಬಿಟ್ಟು ಗೇಲಿ ಮಾಡಿದ್ದಾರೆ.

ಡ್ಯಾಮೇಜ್​ ಕಂಟ್ರೋಲ್​ಗಾಗಿ ಪ್ರಯತ್ನಗಳು ನಡೆದವು. “ದಾದಾ ಹೊಡೆದಾಗ, ಅದು ಸಿಕ್ಸ್​. ದಾದಾ ಮಿಸ್ ಹಿಟ್ ಮಾಡಿದಾಗ, ಅದು ಇನ್ನೂ ಸಿಕ್ಸ್​ ಆಗಿದೆ” ಎಂದು ದಾದಾ ಅಳಿಸಿದ ಟ್ವೀಟ್​ನ ವೈರಲ್​ ಸ್ಕ್ರೀನ್​ಶಾಟ್​ನೊಂದಿಗೆ ಮೀಶೋ ಹಾಸ್ಯಮಯವಾಗಿ ಟ್ವೀಟ್​ ಮಾಡಿದೆ. ಒಟ್ಟಾರೆ ಉದ್ದೇಶ ಈಡೇರಿದ ಖುಷಿಯಲ್ಲಿ ಕಂಪನಿ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...