alex Certify ಅನಾರೋಗ್ಯ ನಿವಾರಿಸುವಲ್ಲಿ ಸೌಂಡ್​ ಹೀಲಿಂಗ್​ ಥೆರಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಾರೋಗ್ಯ ನಿವಾರಿಸುವಲ್ಲಿ ಸೌಂಡ್​ ಹೀಲಿಂಗ್​ ಥೆರಪಿ

ದಿನಕ್ಕೊಂದು ಹೊಸ ಕಾಯಿಲೆಗಳು ಹುಟ್ಟುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಕೆಲವೊಂದಕ್ಕೆ ಮಾತ್ರೆ, ಚುಚ್ಚಮದ್ದು ಪರಿಹಾರ ನೀಡುತ್ತದೆ. ಇನ್ನೂ ಕೆಲವು ಅನಾರೋಗ್ಯಕ್ಕೆ ಧ್ಯಾನ, ಯೋಗವೇ ಮದ್ದು. ಇದಿಷ್ಟೇ ಅಲ್ಲದೇ ಸದ್ಯ ಹೊಸದೊಂದು ಔಷಧ ನೆರವಿಗೆ ಬರುತ್ತಿದೆ ಅದುವೇ ಸೌಂಡ್​ ಹೀಲಿಂಗ್.

ನುರಿತ ತಜ್ಞರೊಬ್ಬರು ಬೌಲ್​ ಮೂಲಕ ಶಬ್ಧವನ್ನು ಹೊಮ್ಮಿಸುತ್ತಾರೆ. ಆ ಶಬ್ಧವನ್ನು ಕೇಳುತ್ತಾ ಮತ್ತು ಅದರ ಜೊತೆಗೆ ಧ್ವನಿಗೂಡಿಸುತ್ತಾ ಗುಣವಾಗುವ ಪ್ರಕ್ರಿಯೆ. ಈ ಸೌಂಡ್​ ಥೆರಪಿ ಗ್ರೀಸ್​ ಕಾಲದಿಂದಲೂ ಇದೆ. ಮಾನಸಿಕ ಸಮಸ್ಯೆಗಳ ನಿವಾರಣೆಗೆ, ಸೈನಿಕರ ಧೃಢ ಮನಸ್ಥಿತಿ ಕಾಯ್ದುಕೊಳ್ಳಲು ಇದೇ ಸೌಂಡ್ ಹೀಲಿಂಗ್ ಬಳಸಲಾಗುತ್ತಿತ್ತು.

ಸದ್ಯ ಈ ಸೌಂಡ್ ಥೆರಪಿಯಿಂದ ರೋಗನಿರೋಧಕಶಕ್ತಿ ಹೆಚ್ಚುತ್ತಿದೆ. ಪ್ರಿಮೆಚ್ಯೂರ್​ ಮಕ್ಕಳಿಗೂ ಕೂಡ ಇದು ನೆರವಾಗುತ್ತಿದೆ. ಮಾನಸಿಕ ಸಮಸ್ಯೆಗಳಾದ ಖಿನ್ನತೆ, ಆತಂಕ ಮತ್ತು ಒತ್ತಡವನ್ನು ನಿವಾರಿಸಲು ಸೌಂಡ್​ ಥೆರಪಿ ಬೆಸ್ಟ್.

ಸೌಂಡ್​ ಥೆರಪಿಯಲ್ಲಿ ಗೈಡೆಡ್ ಮೆಡಿಟೇಷನ್, ನ್ಯೂರೋಲಾಜಿಕ್ ಮ್ಯೂಸಿಕ್ ಥೆರಪಿ ಸೇರಿದಂತೆ ಹಲವಾರು ವಿಭಾಗಗಳಿವೆ. ಸೌಂಡ್​ ಥೆರಪಿಯಿಂದ ಮೂಡ್​ ಸ್ವಿಂಗ್ಸ್​ ಬಗೆಹರಿಸಬಹುದು. ರಕ್ತದೊತ್ತಡ ನಿಯಂತ್ರಣ, ಕೊಲೆಸ್ಟ್ರಾಲ್ ಕಡಿಮೆ ಮಾಡುವುದು, ನಡವಳಿಕೆ ಮತ್ತು ಮಾನಸಿಕ ಸಮಸ್ಯೆಗಳ ನಿವಾರಣೆ, ನಿದ್ರಾ ಹೀನತೆಯಂಥ ಹಲವಾರು ಸಮಸ್ಯೆಗಳನ್ನು ಬಗೆಹರಿಸಬಹುದು.

ಮ್ಯೂಸಿಕ್ ಥೆರಪಿಯಲ್ಲಿ ಭಿನ್ನ ವಿಭಿನ್ನವಾದ ಸೌಂಡ್​ಗಳನ್ನು ಬಳಸಲಾಗುತ್ತದೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿ. ನಿಮ್ಮ ಅನಾರೋಗ್ಯದ ಸ್ಥಿತಿಗೆ ಅನುಗುಣವಾಗಿ ಸೌಂಡ್​ ಫ್ರೀಕ್ವೆನ್ಸಿ ಬಳಸಲಾಗುತ್ತದೆ. ಕೆಲವೊಂದು ಕಮಾಂಡ್​ಗಳನ್ನು ನೀಡಲಾಗುತ್ತದೆ.

ಸಿಂಗಿಂಗ್ ಬೌಲ್, ಟ್ಯೂನಿಂಗ್ ಫೋರ್ಕ್ಸ್, ಪ್ಯಾನ್ ಫ್ಲೂಟ್, ಹಾರ್ಪ್, ಡ್ರಮ್ಸ್​ ಗಳನ್ನು ಈ ಸೌಂಡ್ ಹೀಲಿಂಗ್​ನಲ್ಲಿ ಬಳಸುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...