ಬೆಂಗಳೂರು: ಸಿದ್ದರಾಮಯ್ಯ ಬಗ್ಗೆ ಹೇಳಿಕೆಗೆ ಮುಕುಡಪ್ಪ ಕ್ಷಮೆಯಾಚಿಸಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಕುರುಬ ಸಮುದಾಯದ ಮುಖಂಡ ಕೆ. ಮುಕುಡಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ಕುರುಬರ ಸಂಘ ಹಾಗೂ ಮಠ ಕಟ್ಟಿದ್ದಾರೆ. ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಕೊಡುಗೆ ನೀಡಿದ್ದಾರೆ. ನಾನು ಮತ್ತು ಪುಟ್ಟಸ್ವಾಮಿ ಕುರಿ ಹಾಗೂ ಟಗರು ಬಗ್ಗೆ ಮಾತನಾಡುತ್ತಿದ್ದೆವು. ಮುಖ್ಯಮಂತ್ರಿಗಳು 20 ಕುರಿ ಮತ್ತು ಟಗರು ನೀಡುವ ಯೋಜನೆ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. ಇದೇ ಸಂದರ್ಭದಲ್ಲಿ ಒಂದೇ ಟಗರು ಇಪ್ಪತ್ತು ಕುರಿ ನೋಡಿಕೊಳ್ಳುತ್ತದೆ ಎಂದಿದ್ದು ನಿಜ. ಸಿದ್ದರಾಮಯ್ಯನವರ ಬಗ್ಗೆ ಆ ಪದ ಹೇಳಿದ್ದೇನೆ ಎಂದು ಬಿಂಬಿಸಲಾಗಿದೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.
ನಿನ್ನೆ ಕುರುಬ ಸಮುದಾಯದ ಮುಖಂಡರ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಪಿಸುಮಾತು ಸಂಭಾಷಣೆ ನಡೆಸಿದ್ದ ಮುಕುಡಪ್ಪ ಮತ್ತು ಎಸ್. ಪುಟ್ಟಸ್ವಾಮಿ ಅವರು ಒಂದೇ ಟಗರು 20 ಕುರಿಗಳ ಮೇಲೆ ಎಗರಿ ಬೀಳುತ್ತದೆ. ಮುರಘಾ ಸ್ವಾಮಿ ತರ ಎಲ್ಲಾ ಇದಾರೆ ಎಂದೆಲ್ಲಾ ಮಾತನಾಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.