ಜೀ ಕನ್ನಡದ ಹೆಸರಾಂತ ಕಾರ್ಯಕ್ರಮವಾದ ಕಾಮಿಡಿ ಕಿಲಾಡಿಗಳು ಮೂಲಕ ಎಲ್ಲರ ಮನೆ ಮಾತಾಗಿದ್ದ, ಸೂರಜ್ ಕೆಲ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದರು. ಸೂರಜ್ ನಾಯಕ ನಟನಾಗಿ ಅಭಿನಯಿಸಿರುವ ‘ಕಂಡೋರ್ ಮನೆ ಕಥೆ’ ಸಿನಿಮಾ ಜೂನ್ ಏಳಕ್ಕೆ ತೆರೆ ಮೇಲೆ ಬರಲು ಸಜ್ಜಾಗಿದ್ದು, ಇದಕ್ಕೂ ಮುನ್ನ ಚಿತ್ರತಂಡ ಯುಟ್ಯೂಬ್ ನಲ್ಲಿ ಟ್ರೈಲರ್ ರಿಲೀಸ್ ಮಾಡಿದೆ.
ಪ್ರಣವ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸೂರಜ್ ಸೇರಿದಂತೆ ಅಪೂರ್ವ ಶ್ರೀ, ರಕ್ಷಿತಾ ಕೆರೆ ಮನೆ, ರಮಿತ್ ಏಲಕ್ಕಿ, ಧೀರವ್ ಶ್ರೀ ವಾತ್ಸ, ಡಿಂಗ್ರಿ ನಾಗರಾಜ್ ಮತ್ತು ರಾಜು ಸೂರ್ಯ ತಾರಾ ಬಳಗದಲ್ಲಿದ್ದಾರೆ.
ಜಾನ್ ಕೆನ್ನಡಿ ಸಂಗೀತ ಸಂಯೋಜನೆ ನೀಡಿದ್ದು, ಲೋಕೇಶ್ ಪುಟ್ಟೇಗೌಡ ಸಂಕಲನ, ಪ್ರಜ್ವಲ್ ನೃತ್ಯ ನಿರ್ದೇಶನ, ಕಿರಣ್ ಗಜ ಛಾಯಾಗ್ರಹಣವಿದೆ. ನಮನ ಕ್ರಿಯೇಶನ್ ಲಾಂಛನದಲ್ಲಿ ಮಂಜುಳಾ ಎಸ್ ನಿರ್ಮಾಣ ಮಾಡಿದ್ದಾರೆ.