alex Certify ‘ಶೀಘ್ರದಲ್ಲೇ ಬಿಜೆಪಿಗರ ಹಗರಣವನ್ನು ಬಯಲು ಮಾಡುತ್ತೇವೆ’ ; ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಶೀಘ್ರದಲ್ಲೇ ಬಿಜೆಪಿಗರ ಹಗರಣವನ್ನು ಬಯಲು ಮಾಡುತ್ತೇವೆ’ ; ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ..!

ಬೆಂಗಳೂರು : ಶೀಘ್ರದಲ್ಲೇ ಬಿಜೆಪಿಗರ ಹಗರಣವನ್ನು ಬಯಲು ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ – ಜೆಡಿಎಸ್ ನಾಯಕರಿಗೆ ಇಲ್ಲ. ಅವರದೇ ಹಗರಣಗಳ ರಾಶಿ ಬಿದ್ದಿದೆ, ಅವೆಲ್ಲವನ್ನೂ ಆದಷ್ಟು ಶೀಘ್ರದಲ್ಲಿ ಹೊರತಂದು ಅವರ ಬಂಡವಾಳ ಬಯಲು ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಹಗರಣವೇ ಅಲ್ಲದ ಮುಡಾ ವಿಚಾರವನ್ನು ಬಿಜೆಪಿ – ಜೆಡಿಎಸ್ ನಾಯಕರು ದೊಡ್ಡ ಹಗರಣವೆಂಬಂತೆ ಬಿಂಬಿಸಿ, ಆ ಮೂಲಕ ನಮ್ಮ ಸರ್ಕಾರವನ್ನು ಹೇಗೆ ಅಸ್ಥಿರಗೊಳಿಸಲು ಹೊಂಚು ಹಾಕಿದ್ದಾರೆ ಎಂಬುದನ್ನು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಪಕ್ಷದ ಹಿರಿಯ ನಾಯಕರಾದ ವಿ.ಎಸ್. ಉಗ್ರಪ್ಪ ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನೀವೊಮ್ಮೆ ಅವರ ಮಾತುಗಳನ್ನು ಕೇಳಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗುಡ್ಡ ಕುಸಿತದಲ್ಲಿ ಮನೆ ಕಳೆದುಕೊಂಡ 100 ಕುಟುಂಬಗಳಿಗೆ ಮನೆ

ಗುಡ್ಡ ಕುಸಿತದಿಂದಾಗಿ ನೆರೆಯ ಕೇರಳ ರಾಜ್ಯ ಸಂಕಷ್ಟದಲ್ಲಿದೆ. ನೂರಾರು ಮನೆಗಳು ಕೊಚ್ಚಿ ಹೋಗಿದ್ದು ಜನರ ಬದುಕು ಬೀದಿಪಾಲಾಗಿದೆ, ಇಂತಹ ಸಂಕಷ್ಟದ ಸಮಯದಲ್ಲಿ ಸಂತ್ರಸ್ತರ ಜೊತೆ ನಿಂತು ಅವರಿಗೆ ಮರಳಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂಬ ಉದ್ದೇಶದಿಂದ ಗುಡ್ಡ ಕುಸಿತದಲ್ಲಿ ಮನೆ ಕಳೆದುಕೊಂಡ 100 ಕುಟುಂಬಗಳಿಗೆ ಮನೆ ಕಟ್ಟಿಕೊಡಬೇಕು ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ  ಕೇರಳದ ಮುಖ್ಯಮಂತ್ರಿ
ಪಿಣರಾಯಿ ವಿಜಯನ್ ಅವರ ಜೊತೆ ಮಾತನಾಡಿ, ನೆರವಿನ ಭರವಸೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ನೆರವಿನ ಹಸ್ತ ಚಾಚಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (KIAL), ವೋಲ್ವೋ ಸಂಸ್ಥೆ, ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಸಂಘ(ELCIA) ದ ಸದಸ್ಯ ಸಂಸ್ಥೆಗಳು ಮತ್ತು ಪ್ರಣವ್ ಫೌಂಡೇಷನ್, ಬಯೋಕಾನ್ ಮತ್ತು ಭಾಗೀದಾರ ಸಂಸ್ಥೆಗಳಾದ ನಾರಾಯಣ ಹೆಲ್ತ್ ಮತ್ತು ಸಿಂಜೀನ್, ಆಶಯ ಟ್ರಸ್ಟ್ ಹಾಗೂ ಉತ್ತಿಷ್ಠ ಸ್ವಯಂ ಸೇವಾ ಸಂಸ್ಥೆ ಹೀಗೆ ಸಂತ್ರಸ್ತರ ಜೊತೆ ನಿಂತ ನಾಡಿನ ಎಲ್ಲಾ ಸಂಘ ಸಂಸ್ಥೆಗಳಿಗೆ ತುಂಬುಹೃದಯದ ಧನ್ಯವಾದಗಳು. ಗಡಿರೇಖೆಗಳೆಲ್ಲವನ್ನು ಮೀರಿ ನೊಂದ ಜೀವಗಳ ನೆರವಿಗೆ ಧಾವಿಸಿರುವ ನಿಮ್ಮೆಲ್ಲರ ಕಾಳಜಿ – ಕೈಂಕರ್ಯ ಶ್ಲಾಘನೀಯ ಎಂದು ಹೇಳಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...