![](https://kannadadunia.com/wp-content/uploads/2024/03/ee27b3e8-a1a8-461f-873e-f20cf3780849-1024x679.jpg)
ಇತ್ತೀಚಿಗೆ ಯೂಟ್ಯೂಬ್ ನಲ್ಲಿ ಆಲ್ಬಮ್ ಹಾಡುಗಳು ಸಕ್ಕತ್ ಸೌಂಡ್ ಮಾಡುತ್ತಿದ್ದು, ಗಾನಪ್ರಿಯರ ಗಮನ ಸೆಳೆಯುತ್ತಿವೆ. ಪ್ರೇಮಿಗಳಿಗಾಗಿ ಮಾಡಿರುವ ‘ಏಕೆ ಓಡುವೆ’ ಎಂಬ ಮೆಲೋಡಿ ಆಲ್ಬಮ್ ಹಾಡು ಯೂಟ್ಯೂಬ್ ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಕುರಿತು ಹಾಡಿನ ನಿರ್ದೇಶಕರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಆತ್ಮಾನಂದ್ ಕಬ್ಬೂರ್ ಮತ್ತು ದಿವ್ಯ ಕಾಮತ್ ಈ ಹಾಡಿನ ನಾಯಕ – ನಾಯಕಿಯಾಗಿದ್ದು, ವಿಜೇತ್ ಧ್ವನಿಯಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿಜಯ್ ಬಿರಾದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಸುಮನ್ ಚಾರ್ಲ್ಸ್ ಸಾಹಿತ್ಯವಿದೆ. ವಿಜೇತ್ ನಾಯಕ್ ನೃತ್ಯ ಸಂಯೋಜನೆ ಮಾಡಿದ್ದಾರೆ.