ಬಳಸದೇ ಇರುವ ರೈಲು ಬೋಗಿಗಳನ್ನು ಏನು ಮಾಡುವುದು ಎಂಬ ಹಲವು ವರ್ಷಗಳ ರೈಲ್ವೆ ಇಲಾಖೆಯ ತಲೆನೋವಿಗೆ ಹೊಸ ಉಪಾಯ ಸಿಕ್ಕಿದೆ. ಇವೆಕ್ಕೆಲ್ಲ ಆಕರ್ಷಕ ಬಣ್ಣ ಬಳಿದು, ರೆಸ್ಟೊರೆಂಟ್ ಮಾದರಿಯಲ್ಲಿ ಉಪಾಹಾರ ಕೇಂದ್ರಗಳಾಗಿ ಪರಿವರ್ತಿಸಲು ಇಲಾಖೆ ಮುಂದಾಗಿದೆ. ಅದರ ಮೊದಲ ಯತ್ನವಾಗಿ ’ಮೀಲ್ಸ್ ಆನ್ ವೀಲ್ಸ್’ ವಿನ್ಯಾಸದ ಉದ್ಯಾನದಲ್ಲಿ ನಿಂತಿರುವ ಬೋಗಿಯ ವರ್ಣರಂಜಿತ ರೆಸ್ಟೊರೆಂಟ್ ಮುಂಬಯಿನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ನಲ್ಲಿ ಸಿದ್ಧಗೊಂಡಿದೆ.
ಇದೇ ತಿಂಗಳ ಅಂತ್ಯಕ್ಕೆ ಆರಂಭಗೊಳ್ಳುವ ರೆಸ್ಟೊರೆಂಟ್‌ನಲ್ಲಿ ರೈಲು ಪ್ರಯಾಣಿಕರೇ ಅಲ್ಲದೆಯೇ ಯಾರು ಬೇಕಾದರೂ ಕೂಡ ಈ ವಿಶಿಷ್ಟ ಬೋಗಿ ರೆಸ್ಟೊರೆಂಟ್‌ನಲ್ಲಿ ಆಹಾರ ಖಾದ್ಯಗಳನ್ನು ಸವಿಯಬಹುದಾಗಿದೆ.
BIG NEWS: ಚುನಾವಣೆ ಬಂದಾಗ ಮಾತ್ರ ಇದೆಲ್ಲ ನೆನಪಾಗುತ್ತೆ; ಕುಮಾರಸ್ವಾಮಿಗೆ ಯು.ಟಿ. ಖಾದರ್ ತಿರುಗೇಟು
ಪ್ಲಾಟ್‌ಫಾರ್ಮ್ 18ರಲ್ಲಿ ಬೋಗಿ ರೆಸ್ಟೊರೆಂಟ್ ಕಾರ್ಯನಿರ್ವಹಿಸಲಿದೆ. ಟಿಕೆಟ್ ಖರೀದಿ ಪ್ರದೇಶದಿಂದ ದೂರ ಇರಿಸಿ ಪ್ರಯಾಣಿಕರಿಗೆ ಅನನುಕೂಲ ಆಗದಂತೆ ಮುತುವರ್ಜಿ ವಹಿಸಲಾಗಿದೆ. ಒಂದು ಬಾರಿಗೆ 40 ಜನರು ಬೋಗಿಯಲ್ಲಿ ಕುಳಿತು ಆಹಾರ ಸೇವಿಸಬಹುದು ಎಂದು ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ತಿಳಿಸಿದ್ದಾರೆ.
ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಜನರಿಗಾಗಿ ಕಲ್ಪಿಸಲಾಗಿದೆ. ಬೋಗಿಯಲ್ಲಿ ಎರಡು ವಿಭಾಗಗಳಿದ್ದು, ಒಂದರಲ್ಲಿ ಕೇವಲ ಪಾನೀಯ ಮಾತ್ರವೇ ಪೂರೈಕೆ ಮಾಡಲಾಗುವುದು. ಕಳೆದ 2020ರ ಫೆಬ್ರುವರಿಯಲ್ಲಿ ಪೂರ್ವ ರೈಲ್ವೆ ವಿಭಾಗದ ಅಸಾನ್‌ಸೊಲ್‌ನಲ್ಲಿ ಇದೇ ಮಾದರಿಯ ’ರೆಸ್ಟೊರೆಂಟ್ ಆನ್ ವೀಲ್ಸ್’ ಆರಂಭಿಸಲಾಗಿತ್ತು. ಇದಕ್ಕಾಗಿ ದಶಕಗಳಷ್ಟು ಪುರಾತನ ಬೋಗಿ ಮತ್ತು ಇಂಜಿನ್ ಬಳಸಲಾಗಿತ್ತು.