ಬೆಂಗಳೂರು : ಸೋನುಗೌಡ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಪೋಷಕರಿಗೆ ಕೌನ್ಸಿಲಿಂಗ್ ನಡೆಸಲು ರಕ್ಷಣಾ ಆಯೋಗ ಮುಂದಾಗಿದೆ.
ಮಗುವನ್ನು ಸೋನು ಶ್ರೀನಿವಾಸ್ ಗೌಡ ದತ್ತು ಪಡೆದ್ರಾ..? ಏನಾದರೂ ಹಣದ ಆಮಿಷ ಒಡ್ಡಿದ್ರಾ..? ಹಾಗಾದರೆ ಪೋಷಕರು ಯಾಕೆ ದೂರ ಕೊಡಲಿಲ್ಲ ಎಂಬ ವಿವಿಧ ಆಯಾಮಗಳಲ್ಲಿ ಕೌನ್ಸಿಲಿಂಗ್ ನಡೆಸಲು ರಕ್ಷಣಾ ಆಯೋಗ ಮುಂದಾಗಿದೆ. ಸದ್ಯ ಮಗು ಬಾಲಿಕ ಆಶ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ನಿಗಾದಲ್ಲಿದೆ. ತಂದೆ ತಾಯಿಗಳನ್ನು ಕೌನ್ಸಿಲಿಂಗ್ ನಡೆಸಲು ರಕ್ಷಣಾ ಆಯೋಗ ಮುಂದಾಗಿದ್ದು, ಅವರದ್ದು ಏನಾದರೂ ತಪ್ಪು ಕಂಡು ಬಂದಲ್ಲಿ ಕ್ರಮ ಜಾರಿಗೊಳಿಸುವ ಸಾಧ್ಯತೆಯಿದೆ.
ಅಕ್ರಮವಾಗಿ ಮಗು ದತ್ತು ಪ್ರಕರಣದಲ್ಲಿ ರೀಲ್ಸ್ ರಾಣಿ ಸೋನುಗೌಡ ಸದ್ಯ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡರನ್ನು ಬಂಧಿಸಿ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಚೈಲ್ಡ್ ವೇಲ್ ಫೇರ್ ಕಮಿಟಿ ಅಧಿಕಾರಿಗಳು ಬ್ಯಾಡರಹಳ್ಳಿ ದೂರು ನೀಡಿದ ದೂರಿನ ಹಿನ್ನೆಲೆ ಅಂದ್ರಹಳ್ಳಿ ನಿವಾಸದಲ್ಲಿ ಸೋನುಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ಉತ್ತರ ಕರ್ನಾಟಕ ಮೂಲದ ಎಂಟು ವರ್ಷದ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಸೋನು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ್ದರು. ಸೋನುಗೌಡ ಅವರು ಮಗುವನ್ನು ದತ್ತು ಪಡೆಯಲು ಅನುಸರಿಬೇಕಾದ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.ಈ ಹಿನ್ನೆಲೆ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಸೋನು ಗೌಡರನ್ನು ಬಂಧಿಸಲಾಗಿತ್ತು. ನಂತರ ಸೋನು ಗೌಡರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು ವಿಚಾರಣೆ ನಡೆಸಿದ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.