ಕಳೆದ ವರ್ಷ ಕೋವಿಡ್ ಸಾಂಕ್ರಮಿಕವು ದೇಶಾದ್ಯಂತ ಅಲೆ ಸೃಷ್ಟಿಸಲು ಆರಂಭಿಸಿದ ದಿನಗಳಿಂದಲೂ ಅಸಹಾಯಕರ ನೆರವಿಗೆ ನಿಂತಿರುವ ನಟ ಸೋನು ಸೂದ್ ರಿಯಲ್ ಲೈಫ್ ಹೀರೋ ಆಗಿಬಿಟ್ಟಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿ ದೇಶಕ್ಕೆ ಬಲ ತುಂಬಿಸುತ್ತಿರುವ ಮಂದಿಯಲ್ಲಿ ಒಬ್ಬರಾದ ಸೂದ್, ವಲಸೆ ಕಾರ್ಮಿಕರಿಗೆ ಊಟ ಹಾಗೂ ಅವರವರ ಊರುಗಳಿಗೆ ಮರಳಿ ಹೋಗಲು ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ಎಲ್ಲೆಡೆ ಭಾರೀ ಪ್ರಶಂಸೆಗೆ ಗುರಿಯಾಗಿದ್ದರು. ಇದೀಗ ಆಮ್ಲಜನಕದ ಕೊರತೆಯನ್ನು ಮನಗಂಡಿರುವ ಸೋನು, ದೇಶಾದ್ಯಂತ ಆಮ್ಲಜನಕದ 18 ಘಟಕಗಳನ್ನು ಸ್ಥಾಪಿಸುವುದಾಗಿ ಮಾತು ಕೊಟ್ಟಿದ್ದಾರೆ.
ರೋಹಿಣಿ ಸಿಂಧೂರಿ ಆರೋಪ ನಿಜವಾದಲ್ಲಿ ಸಾರ್ವಜನಿಕ ಜೀವನದಿಂದಲೇ ನಿವೃತ್ತಿ: ಸಾರಾ ಬಹಿರಂಗ ಸವಾಲ್
ಮಂಗಳೂರು ಹಾಗೂ ಆಂಧ್ರ ಪ್ರದೇಶದ ಕರ್ನೂಲು ಮತ್ತು ನೆಲ್ಲೂರಿನಲ್ಲಿ ಅದಾಗಲೇ ಆಮ್ಲಜನಕದ ಘಟಕ ಸ್ಥಾಪನೆಯ ಕೆಲಸ ಆರಂಭಗೊಂಡಿದ್ದು, ಮಿಕ್ಕ ರಾಜ್ಯಗಳಲ್ಲೂ ಶೀಘ್ರ ಕೆಲಸ ಶುರುವಾಗಲಿದೆ ಎಂದ ಸೂದ್, “ಕಳೆದ ಕೆಲ ತಿಂಗಳುಗಳಲ್ಲಿ ನಾವು ಬಹಳ ದೊಡ್ಡ ಸಮಸ್ಯೆಯೊಂದನ್ನು ಕಂಡಿದ್ದು, ನಾವೆಲ್ಲಾ ಆಮ್ಲಜನಕದ ಅಲಭ್ಯತೆಯನ್ನು ಎದುರಿಸುತ್ತಿದ್ದೇವೆ. ನಾನು ಹಾಗೂ ನನ್ನ ತಂಡ, ಆಮ್ಲಜನಕದ ಸಮಸ್ಯೆಯನ್ನು ಹೋಗಲಾಡಿಸಬೇಕೆಂದು ಆಲೋಚನೆ ಮಾಡುತ್ತಿದ್ದವು. ಹೀಗಾಗಿ ಆಮ್ಲಜನಕದ ಘಟಕಗಳನ್ನು ಸಾಧ್ಯವಾದಷ್ಟು ಕಡೆಗಳಲ್ಲಿ ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ” ಎಂದಿದ್ದಾರೆ.
ಬಿಲ್ಡರ್ ಮಾಡಿದ ಕೆಲಸ ಕಂಡು ಮನೆ ಮಾಲೀಕ ಕಂಗಾಲು…!
ತಮಿಳುನಾಡು, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶದ ಹಾಗೂ ಇನ್ನಿತರ ರಾಜ್ಯಗಳಲ್ಲಿ ಆಮ್ಲಜನಕದ ಘಟಕಗಳನ್ನು ಸ್ಥಾಪಿಸಲು ಸೂದ್ ಮುಂದಾಗಿದ್ದಾರೆ.