ತಾನು ಓದುವ ಶಾಲೆಯ ದುರವಸ್ಥೆಯನ್ನು ಹಂಚಿಕೊಳ್ಳಲು ವರದಿಗಾರನಂತೆ ವರ್ತಿಸಿದ ಪುಟ್ಟ ಶಾಲಾ ಬಾಲಕನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ನಟ ಸೋನು ಸೂದ್ ಅವರು ಜಾರ್ಖಂಡ್ನ ಆ ಬಾಲಕ ಸರ್ಫರಾಜ್ಗೆ ನೆರವಾಗಲು ಬಯಸಿದ್ದಾರೆ.
ಆತನಿಗೆ ಗುಣಮಟ್ಟದ ಶಿಕ್ಷಣದ ಅವಕಾಶವನ್ನು ನೀಡುವ ಭರವಸೆ ನೀಡಿದ್ದು, ಆ ವಿಡಿಯೊವನ್ನು ಅವರೂ ಟ್ವೀಟ್ ಮಾಡಿದ್ದಾರೆ. ಹೊಸ ಶಾಲೆ ಮತ್ತು ಹಾಸ್ಟೆಲ್ ನಿನಗಾಗಿ ಕಾಯುತ್ತಿರುವ ಕಾರಣ ಬ್ಯಾಗ್ ಅನ್ನು ಪ್ಯಾಕ್ ಮಾಡು ಎಂದು ಸಂದೇಶ ಬರೆದಿದ್ದಾರೆ.
ಕೆಲವು ದಿನಗಳ ಹಿಂದೆ ವೈರಲ್ ಆಗಿರುವ ವಿಡಿಯೊದಲ್ಲಿ ಬಾಲಕನೊಬ್ಬ ತನ್ನ ಶಾಲೆಯಲ್ಲಿ ಸರಿಯಾದ ಶೌಚಾಲಯ ಇಲ್ಲದಿರುವುದು, ತರಗತಿಗಳ ಹದಗೆಟ್ಟ ಪರಿಸ್ಥಿತಿಯನ್ನು ತೋರಿಸಲು ವರದಿಗಾರನ ರೂಪದಲ್ಲಿ ವರದಿ ಪ್ರಸ್ತುತಪಡಿಸಿದ್ದ. ಅದನ್ನು ವಿಡಿಯೋ ಮಾಡಿದ್ದವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಹಜವಾಗಿಯೇ ಈ ವಿಡಿಯೋ ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. ಬಾಲಕನ ವರದಿಗಾರಿಕೆಯ ಕೌಶಲ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ವಿಡಿಯೋವನ್ನು ಸೋನು ಸೂದ್ ಗಮನಿಸಿದ್ದು, ಸರ್ಫರಾಜ್ಗೆ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ.