
ಜೂನ್ 12 ರಂದು ಸಾಹಿಲ್ ಖಾನ್, ಸೋನು ಸೂದ್ ಅವರನ್ನು ಟ್ವೀಟ್ನಲ್ಲಿ ಟ್ಯಾಗ್ ಮಾಡಿ, “ನಾನು ಥಾಯ್ಲೆಂಡ್ ನಲ್ಲಿ ಸಿಲುಕಿಕೊಂಡಿದ್ದೇನೆ ಮತ್ತು ಇಲ್ಲಿಂದ ಹೊರಗೆ ಬರಲು ಯಾವುದೇ ಆಯ್ಕೆಯಿಲ್ಲ. ಸೋನು ಸರ್, ದಯವಿಟ್ಟು ಸಹಾಯ ಮಾಡಿ” ಎಂದು ವಿನಂತಿಸಿದ್ದ. ಒಂದು ದಿನದ ಬಳಿಕ ಸೂದ್ ಉತ್ತರಿಸಿ “ನಿಮಗೆ ಟಿಕೆಟ್ ಕಳುಹಿಸುತ್ತಿದ್ದೇನೆ. ನಿಮ್ಮ ಕುಟುಂಬವನ್ನು ಭೇಟಿ ಮಾಡುವ ಸಮಯ ಬಂದಿದೆ” ಎಂದು ತಿಳಿಸಿದ್ದರು.
ಕೆಲವು ಗಂಟೆಗಳ ನಂತರ ಸಾಹಿಲ್ ಖಾನ್ ವಿಡಿಯೋವನ್ನು ಪೋಸ್ಟ್ ಮಾಡಿ, ನೆರವಾದ ನಟನಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಸಹಾಯ ಪಡೆಯಲು ಈ ಹಿಂದೆ ಭಾರತೀಯ ಏಜೆನ್ಸಿಗಳಿಗೆ ಟ್ಯಾಗ್ ಮಾಡಿದ್ದೆ ಆದರೆ ಯಾರೂ ಪ್ರತಿಕ್ರಿಯಿಸಿರಲಿಲ್ಲ ಎಂದು ಹೇಳಿದ್ದಾರೆ.
ಕೊನೆಗೆ ಭಾರತವನ್ನು ತಲುಪಿದೆ. ಸೋನು ಸೂದ್ ನಿಜವಾದ ರತ್ನ. ನಾನು ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತೇನೆ ಸೋನು ಸೂದ್ ಸರ್. ಇನ್ನಷ್ಟು ಯಶಸ್ಸು ನಿಮ್ಮದಾಗಲಿ. ನೀವು ನನಗೆ ಮಾಡಿದ ಸಹಾಯವನ್ನು ಈ ದಿನಗಳಲ್ಲಿ ಯಾರೂ ಮಾಡುವುದಿಲ್ಲ, ರಿಯಲ್ ಹೀರೋ ಎಂದು ಕೊಂಡಾಡಿದ್ದಾರೆ.
ಕೆಲಸದ ನಿರೀಕ್ಷೆಯಿಂದ ಅಲ್ಲಿಗೆ ತೆರಳಿ ವಂಚನೆಗೊಳಗಾದ ನಂತರ ಸಾಹಿಲ್ ಖಾನ್ ಥಾಯ್ಲೆಂಡ್ ತೊರೆಯಬೇಕಾಗಿ ಬಂದಿತ್ತು. ವಾಪಸ್ ಮರಳಲು ವಿಮಾನ ಪ್ರಯಾಣ ಟಿಕೆಟ್ ಖರೀದಿಸಲು ಏಕೆ ಸಾಧ್ಯವಿಲ್ಲವಾಯಿತು ಎಂದು ಟ್ವಿಟಿಗರು ಖಾನ್ ಅವರನ್ನು ಪ್ರಶ್ನಿಸಿದ್ದು, ಖಾನ್ ತಮ್ಮ ಪರಿಸ್ಥಿತಿ ವಿವರಿಸಿದ್ದಾರೆ.
ಇದೊಂದು ಹಗರಣ, ನನ್ನ ಪಾಸ್ಪೋರ್ಟ್ ತೆಗೆದುಕೊಂಡಿದ್ದರು, ಇಂಟರ್ನೆಟ್ ಸಂಪರ್ಕವಿರಲಿಲ್ಲ. ಅವರ ಅನುಮತಿಯಿಲ್ಲದೆ ಆವರಣದಿಂದ ಹೊರಗೆ ಹೋಗುವಂತಿರಲಿಲ್ಲ ಎಂದು ವಿವರಿಸಿದ್ದಾರೆ.
https://twitter.com/iemkhansahil/status/1536364071217377280?ref_src=twsrc%5Etfw%7Ctwcamp%5Etweetembed%7Ctwterm%5E1536364071217377280%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fsonu-sood-helps-indian-man-stuck-in-thailand-7969229%2F