ಬಾಲಿವುಡ್ ನಟ ಸೋನು ಸೂದ್, ಭಾರತದ ಮೊದಲ ಗ್ರಾಮೀಣ ಬಿ 2 ಬಿ ಟ್ರಾವೆಲ್ ಟೆಕ್ ಪ್ಲಾಟ್‌ಫಾರ್ಮ್, ಟ್ರಾವೆಲ್ ಯೂನಿಯನ್ ಪ್ರಾರಂಭಿಸಿದ್ದಾರೆ. ನಟ ಸೋನು ಸೂದ್ ಅವರ, ಟ್ರಾವೆಲ್ ಯೂನಿಯನ್, ಪ್ರತಿ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡಲಿದೆ. ಗ್ರಾಮೀಣ ಜನರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು, ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಇದರಲ್ಲಿ ಮಾಡಬಹುದು. ಹೋಟೆಲ್ ಬುಕಿಂಗ್ ಕೂಡ ನಡೆಯಲಿದೆ. ಟ್ರಾವೆಲ್ ಉದ್ಯಮಿಗಳು ಮತ್ತು ಟ್ರಾವೆಲ್ ಏಜೆಂಟರ್ ಗಳಿಗೆ ಗಳಿಕೆ ಹೆಚ್ಚಿಸುವ ಅವಕಾಶವನ್ನು ಈ ಅಪ್ಲಿಕೇಷನ್ ಮೂಲಕ ನೀಡಲಾಗ್ತಿದೆ.
ಟ್ರಾವೆಲ್ ಯೂನಿಯನ್, ಅಸ್ತಿತ್ವದಲ್ಲಿರುವ ಟ್ರಾವೆಲ್ ಏಜೆಂಟ್‌ಗಳಿಗೆ ಆದಾಯ ಗಳಿಸಲು ನೆರವಾಗಲಿದೆ. ಟ್ರಾವೆಲ್ ಏಜೆಂಟರ ವ್ಯವಹಾರ ಪ್ರಾರಂಭಿಸಲು ಬಯಸಿದರೆ, ಇದರ ಸಹಾಯದಿಂದ, ಶೂನ್ಯ ಹೂಡಿಕೆಯೊಂದಿಗೆ ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು. ಕಂಪನಿಯು ಒದಗಿಸಿದ ಮಾಹಿತಿಯ ಪ್ರಕಾರ, ಟ್ರಾವೆಲ್ ಯೂನಿಯನ್ ಸದಸ್ಯರ ಆನ್‌ಬೋರ್ಡಿಂಗ್‌ಗೆ ಯಾವುದೇ ಹೂಡಿಕೆ ಅವಶ್ಯಕತೆಯಿಲ್ಲ.
ಇಂದು ಬಿ 2 ಬಿ ಟ್ರಾವೆಲ್ ಟೆಕ್ ಪ್ಲಾಟ್‌ಫಾರ್ಮ್ ಉದ್ಘಾಟಿಸಿದ ಸೋನು ಸೂದ್, ಲಾಕ್‌ಡೌನ್ ಸಮಯದಲ್ಲಿ, ಗ್ರಾಮೀಣ ಭಾರತೀಯರು ಎದುರಿಸುತ್ತಿರುವ ಸವಾಲುಗಳು ಹಾಗೂ ಸಣ್ಣ ವ್ಯಾಪಾರ ಮಾಲೀಕರ ಹೋರಾಟಗಳನ್ನು ನಾನು ನೋಡಿದ್ದೇನೆ. ಗ್ರಾಮೀಣ ಜನರಿಗೆ, ಪ್ರಸ್ತುತ ತಮ್ಮ ಪ್ರಯಾಣವನ್ನು ಪೂರ್ವ-ಯೋಜಿಸಲು ಯಾವುದೇ ಆಯ್ಕೆಗಳಿಲ್ಲ. ಟ್ರಾವೆಲ್ ಯೂನಿಯನ್, ಗ್ರಾಮೀಣ ಟ್ರಾವೆಲ್ ಏಜೆಂಟ್‌ಗಳಿಗಾಗಿ ಬಿ 2 ಬಿ ಟ್ರಾವೆಲ್ ಟೆಕ್ ಪ್ಲಾಟ್‌ಫಾರ್ಮ್ ಶುರು ಮಾಡಿದೆ. ಇದು ಜನರಿಗೆ ನೆರವಾಗಲಿದೆ ಎಂದಿದ್ದಾರೆ.