ಬೆಂಗಳೂರು : ಅಯೋಧ್ಯೆ ರಾಮಮಂದಿರದಲ್ಲಿ ಇಂದು ನಡೆದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಹಲವು ಗಣ್ಯರು, ನಟರು ಸಾಕ್ಷಿಯಾದರು. ನಟ ಸೋನು ನಿಗಮ್ ಅಯೋಧ್ಯೆಯ ರಾಮ ಮಂದಿರದಲ್ಲಿ ಭಾವಪೂರ್ಣ ಪ್ರದರ್ಶನ ನೀಡಿದರು.
ಐತಿಹಾಸಿಕ ಕಾರ್ಯಕ್ರಮದಲ್ಲಿ ನಟ ಸೋನು ನಿಗಮ್ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎಲ್ಲರನ್ನೂ ಭಕ್ತಿಯ ಸುಧೆಯಲ್ಲಿ ತೇಲಿಸಿದರು.
ಕಾರ್ಯಕ್ರಮದ ನಂತರ, ಸೋನು ನಿಗಮ್ ತಮ್ಮ ಅನುಭವವನ್ನು ಹಂಚಿಕೊಳ್ಳಲು ಮಾಧ್ಯಮಗಳು ಕೇಳಿದಾಗ ಭಾವುಕರಾದರು. ನನಗೆ ಹೇಳಲು ಏನೂ ಉಳಿದಿಲ್ಲ, ಆದರೆ ನನ್ನ ಕಣ್ಣೀರು ಮಾತ್ರ ಮಾತನಾಡುತ್ತದೆ ಎಂದಷ್ಟೇ ಹೇಳಿ ಭಾವುಕರಾದರು.