ವಿನಯ್ ರಾಜಕುಮಾರ್ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಅಂದೊಂದಿತ್ತು ಕಾಲ’ ಚಿತ್ರದ ‘ಮುಂಗಾರು ಮಳೆಯಲ್ಲಿ’ ಎಂಬ ಮೆಲೋಡಿ ಹಾಡನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ಸಿದ್ ಶ್ರೀರಾಮ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಕಂಡಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಗೋಲ್ಡನ್ ಸ್ಟಾರ್ ಗಣೇಶ್, ಯೋಗರಾಜ್ ಭಟ್ ಹಾಗೂ ಪೂಜಾ ಗಾಂಧಿ ಅವರ ಕೈಯಲ್ಲಿ ಈ ಹಾಡನ್ನು ಲಾಂಚ್ ಮಾಡಿಸಲಾಗಿದೆ.
ಕೀರ್ತಿ ಕೃಷ್ಣಪ್ಪ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಭುವನ್ ಮೂವೀಸ್ ಬ್ಯಾನರ್ ನಡಿ ಭುವನ್ ಸುರೇಶ್ ನಿರ್ಮಾಣ ಮಾಡಿದ್ದು, ವಿನಯ್ ರಾಜಕುಮಾರ್, ಅದಿತಿ ಪ್ರಭುದೇವ ಸೇರಿದಂತೆ ವಿ ರವಿಚಂದ್ರನ್, ನಿಶಾ ರವಿ ಕೃಷ್ಣನ್, ಜಗ್ಗಪ್ಪ, ಗೋವಿಂದೇಗೌಡ ತೆರೆ ಹಂಚಿಕೊಂಡಿದ್ದಾರೆ. ಅರಸು ಅಂತಾರೆ, ಸಂತೋಷ್ ಮುದ್ದಿನ ಮನೆ, ಹಾಗೂ ಕ್ರಾಂತಿ ಕುಮಾರ್ ಸಂಭಾಷಣೆ ಬರೆದಿದ್ದು, ಎ ಆರ್ ಕೃಷ್ಣ ಸಂಕಲನ, ಅಭಿಷೇಕ್ ಜಿ ಕಾಸರಗೂಡು ಛಾಯಾಗ್ರಹಣವಿದೆ.