ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ ವಿಕಾಶ್ ಉತ್ತಯ್ಯ ಮತ್ತು ರಾಧಾ ಭಾಗವತಿ ಅಭಿನಯಿಸಿರುವ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ‘ಚುರುಕು ನೋಟವೇ’ ಎಂಬ ಹಾಡಿನ ಪ್ರೊಮೋ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ರಜತ್ ಹೆಗಡೆ ಧ್ವನಿಯಾಗಿದ್ದು, ಸುನಾದ್ ಗೌತಮ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಅಭಿಜಿತ್ ತೀರ್ಥಹಳ್ಳಿ ಅವರ ಸಾಹಿತ್ಯವಿದೆ. ಚಿತ್ರ ತಂಡ ಇನ್ನೇನು ಕೆಲವೇ ದಿನಗಳಲ್ಲಿ ಇದರ ಸಂಪೂರ್ಣ ಹಾಡನ್ನು ರಿಲೀಸ್ ಮಾಡಲಿದ್ದಾರೆ.
ಈ ಚಿತ್ರವನ್ನು ಯಶಸ್ವಿನಿ ಕ್ರಿಯೇಶನ್ಸ್ ಬ್ಯಾನರ್ ನಡಿ ವಿಜಿ ಮಂಜುನಾಥ್ ಮತ್ತು ಪೂರ್ಣಿಮಾ ಗೌಡ ನಿರ್ಮಾಣ ಮಾಡಿದ್ದು, ವಿಕಾಶ್ ಉತ್ತಯ್ಯ ಮತ್ತು ರಾಧಾ ಭಾಗವತಿ ಸೇರಿದಂತೆ ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ ಶ್ರೀಕಾಂತ್, ಅಶ್ವಿನ್ ಹಾಸನ್ ತೆರೆ ಹಂಚಿಕೊಂಡಿದ್ದಾರೆ. ಸುನಾದ್ ಗೌತಮ್ ಅವರ ಸಂಗೀತ ಹಾಗೂ ಛಾಯಾಗ್ರಹಣವಿದ್ದು, ಹರ್ಷಿತ್ ಪ್ರಭು ಸಂಕಲನವಿದೆ.