
ಸೋನಂ ಕೆಲವು ರುಚಿಕರವಾದ ಮೇಪಲ್ ಸಿರಪ್ನೊಂದಿಗೆ ಪ್ಯಾನ್ಕೇಕ್ಗಳನ್ನು ಕೂಡ ಸವಿದಿದ್ದಾರೆ. ಇದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸೋನಂ, ತನ್ನ ಸ್ನೇಹಿತ ಇಮ್ರಾನ್ ಅಮೆಡ್ಗೆ ಟ್ಯಾಗ್ ಮಾಡಿದ್ದಾರೆ. ಈ ಮೇಪಲ್ ಸಿರಪ್ ಅನ್ನು ಕೆನಡಾದಿಂದ ತನ್ನ ಸ್ನೇಹಿತ ಇಮ್ರಾಮ್ ಕಳುಹಿಸಿಕೊಟ್ಟಿರುವುದಾಗಿ ಸೋನಂ ಹೇಳಿದ್ದಾರೆ. ಹೀಗಾಗಿ ಅವರಿಗೆ ಧನ್ಯವಾದಗಳನ್ನು ಕೂಡ ತಿಳಿಸಿದ್ದಾರೆ.
ಇನ್ನು, ತಾಜಾ ಬೆರಿಹಣ್ಣುಗಳು ಮತ್ತು ಸ್ಟ್ರಾಬೆರಿಗಳಿರುವ ಪ್ಯಾನ್ಕೇಕ್ಗಳ ಮೇಲೆ ಸೋನಮ್ ಸಿರಪ್ ಹಾಕಿದ್ದಾರೆ. ಸೋನಂ ಮತ್ತು ನೇಹಾ ಅವರು ತಯಾರಿಸಿದ ಅನೇಕ ಭಕ್ಷ್ಯಗಳನ್ನು ಒಳಗೊಂಡಿರುವ ವಿಡಿಯೋವನ್ನು ಕೂಡ ಅಪ್ಲೋಡ್ ಮಾಡಿದ್ದಾರೆ. ಬಿರಿಯಾನಿ, ದಾಲ್ ತುರಿ ಹಾಗೂ ರೈತಾವನ್ನು ಇವರು ತಯಾರಿಸಿದ್ದಾರಿ, ಭೂರಿ ಭೋಜನ ಸವಿದಿದ್ದಾರೆ.
ಕೆಲವು ದಿನಗಳ ಹಿಂದೆ ಸೋನಮ್, ಲಂಡನ್ ಮೂಲದ ರೆಸ್ಟೋರೆಂಟ್ ಮಿಮಿ ಮೇ ಫೇರ್ನಲ್ಲಿನ ಅನುಭವದ ಕುರಿತು ಕೆಲವು ಸ್ಟೋರಿಗಳನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು. ಅದರಲ್ಲಿ ರೆಸ್ಟೋರೆಂಟ್ನ ಸುಂದರವಾದ ಅಲಂಕಾರದ ಫೋಟೋವನ್ನು ಸೋನಂ ಕ್ಲಿಕ್ಕಿಸಿದ್ದರು. ರುಚಿಕರವಾದ ಮಾಂಸದ ತುಂಡನ್ನು ಕುಶಲತೆಯಿಂದ ಕತ್ತರಿಸುತ್ತಿರುವ ಬಾಣಸಿಗನನ್ನು ಸಹ ಸೋನಂ ಸೆರೆಹಿಡಿದಿದ್ದಾರೆ. ಜೊತೆಗೆ ಇಷ್ಟಪಟ್ಟ ಖಾದ್ಯದ ಫೋಟೋವನ್ನು ಸಹ ಅವರು ಹಂಚಿಕೊಂಡಿದ್ದಾರೆ. ಮ್ಯಾಂಡರಿನ್ ಮತ್ತು ಪೆಕನ್ ಕ್ರಂಚ್, ವೆನಿಲ್ಲಾ ಬೀನ್ ಐಸ್ ಕ್ರೀಮ್ ಮತ್ತು ಕೊಕೊ-ಮಾವಿನ ಸಸ್ಯಾಹಾರಿ ಸಂಡೇಯೊಂದಿಗೆ ಚಾಕೊಲೇಟ್ ಕೇಕ್ ಅನ್ನು ಕೂಡ ಅವರು ಸವಿದಿದ್ದಾರೆ. ಇಂತಹ ಅದ್ಭುತ ಖಾದ್ಯಗಳ ಫೋಟೋ ನೋಡಿದ ನೆಟ್ಟಿಗರಂತೂ ಬಾಯಲ್ಲಿ ನೀರು ಸುರಿಸಿದ್ದೇ ಸುರಿಸಿದ್ದು..!
ಇನ್ನು ದೀಪಾವಳಿ ಹಬ್ಬದ ಸ್ಪೆಷಲ್ ಆಗಿ ಸೋನಂ ಕಪೂರ್ ಸ್ವತಃ ಬೇಸನ್ ಲಡ್ಡು ತಯಾರಿಸಿದ್ದಾರೆ. ಈ ವಿಡಿಯೋವನ್ನು ಕೂಡ ಇನ್ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿದ್ದಾರೆ.
https://www.instagram.com/p/CV2ooXGqrHY/
