
ರಾಜ್ಯದಲ್ಲಿ ಸಂಚಲನವನ್ನು ಮೂಡಿಸಿರುವ ಹಿಜಾಬ್ ವಿವಾದದ ಬಗ್ಗೆ ಬಾಲಿವುಡ್ ನಟಿ ಸೋನಂ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಪೇಟಾವನ್ನು ಧರಿಸುವುದು ಆಯ್ಕೆ ಎಂದಮೇಲೆ ಹಿಜಾಬ್ ಒಂದು ಆಯ್ಕೆ ಯಾಕೆ ಆಗಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ರಾಜ್ಯದಲ್ಲಿ ಮುಂದಿನ ಆದೇಶದವರೆಗೂ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶವನ್ನು ಹೊರಡಿಸಿದೆ.
ಈ ಹಿಂದೆ ಕಮಲ್ ಹಾಸನ್, ರಿಚಾ ಚಡ್ಡಾ, ಒನಿರ್ ಹಾಗೂ ಆಲಿ ಗೋನಿ ಸೇರಿದಂತೆ ಸಾಕಷ್ಟು ನಟರು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಇದೀಗ ಸೋನಮ್ ಕಪೂರ್ ಕೂಡ ಈ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೇಟಾ ಧರಿಸಿರುವ ಪುರುಷ ಹಾಗೂ ಹಿಜಾಬ್ನಲ್ಲಿರುವ ಮಹಿಳೆಯ ಫೋಟೋವನ್ನು ಶೇರ್ ಮಾಡಿದ ನಟಿ ಸೋನಂ ಕಪೂರ್ ಪೇಟಾವನ್ನು ತೊಡುವುದು ಒಂದು ಆಯ್ಕೆ ಎಂದಮೇಲೆ ಹಿಜಾಬ್ಗೆ ಏಕೆ ಈ ಆಯ್ಕೆಯನ್ನು ನೀಡಲಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
