ಸಾವು ಯಾವತ್ತೂ ಹೇಳಿ ಕೇಳಿ ಬರುವುದಿಲ್ಲ. ಈಗ ಇದು ಮತ್ತೊಮ್ಮೆ ಸಾಬೀತಾದಂತಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದ ಹಾಗೂ ಭಾರತೀಯ ಜನತಾ ಪಕ್ಷದ ನಾಯಕಿಯಾಗಿದ್ದ ಸೋನಾಲಿ ಫೋಗಟ್ ಅವರ ನಿಧನದ ಸುದ್ದಿ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ.
ಸೋನಾಲಿ ಫೋಗಟ್ 41ನೇ ವಯಸ್ಸಿನಲ್ಲಿ ಗೋವಾದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಸೋನಾಲಿ, ತಮ್ಮ ಸಿಬ್ಬಂದಿಗಳೊಂದಿಗೆ ಗೋವಾಗೆ ಹೋಗಿದ್ದರು. ಆಗ ಅವರು ರೆಕಾರ್ಡ್ ಮಾಡಿರುವ ವಿಡಿಯೋ ಒಂದನ್ನ, ಸಾಯುವ ಕೆಲವೇ ಗಂಟೆಗಳ ಹಿಂದಷ್ಟೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಟಿಕ್‌ಟಾಕ್ ಬ್ಯಾನ್ ಆಗುವ ಮೊದಲು ಸೋನಾಲಿ ಫೋಗಟ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಸಕ್ರಿಯರಾಗಿದ್ದವರು. ಇವರು ಹಿಂದಿ ಬಿಗ್‌ಬಾಸ್-14 ರಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು. ವಯಸ್ಸು ಕೇವಲ 42 ಆದರೂ ಇವರು ರಾಜಕೀಯದಲ್ಲೂ ತಕ್ಕ ಮಟ್ಟಿಗೆ ಹೆಸರು ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಲ್ದೀಪ್ ಬಿಷ್ಣೋಯ್ ವಿರುದ್ಧ ಆಡಂಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಸೋನಾಲಿ ಫೋಗಟ್ ಅವರ ಸಾವಿನ ಸುದ್ದಿ ನಿಜಕ್ಕೂ ಆಘಾತವನ್ನ ಉಂಟುಮಾಡಿದೆ. ಅದರಲ್ಲೂ ಈಗ ಸೋನಾಲಿ ಅವರು ಸಾವಿನ ಕೆಲವೇ ಕೆಲವು ಗಂಟೆಗಳ ಮೊದಲು ತಮ್ಮ ಕೊನೆಯ ವಿಡಿಯೋವನ್ನ ಅಭಿಮಾನಿಗಳಿಗಾಗಿಯೇ ಹಂಚಿಕೊಂಡಿದ್ದೆರು.
ಇದರಲ್ಲಿ ಸೋನಾಲಿಯವರು ಗುಲಾಬಿ ಬಣ್ಣದ ಪೇಟವನ್ನು ಧರಿಸಿ, ಬಾಲಿವುಡ್‌ನ ರೆಟ್ರೋ ಹಾಡಾಗಿರುವ ‘ರುಖ್ ಸೆ ಜರಾ ನಕಾಬ್ ಹಟಾ ದೋ‘ ಹಾಡಿಗೆ ರೀಲ್ ಮಾಡಿದ್ದಾರೆ. ಇದರಲ್ಲಿ ಸೋನಾಲಿಯವರು ಖುಷಿಯಿಂದ ಓಡಾಡುತ್ತಿರುವುದನ್ನ ಕಾಣಬಹುದು. ಅಷ್ಟೆ ಅಲ್ಲ ಇನ್ಸ್ಟಾಗ್ರಾಮ್ ಪ್ರೊಫೈಲ್ ಪಿಕ್ಚರನ್ನ ಬದಲಿಸಿ #Mynewprofilepic ಅಂತ ಟೈಟಲ್ ಕೊಟ್ಟಿದ್ದಾರೆ.
ಈ ವಿಡಿಯೋ ನೋಡಿ ಸೋನಾಲಿ ಫೋಗಟ್ ಅವರ ಅಭಿಮಾನಿಗಳು ಇನ್ನಷ್ಟು ಭಾವುಕರಾಗಿದ್ದಾರೆ. ಈ ಸಾವಿನ ಸುದ್ದಿಯಿಂದ ಚೇತರಿಸಿಕೊಳ್ಳಲು ಇನ್ನೂ ಸಮಯ ಬೇಕು. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ಧಾರೆ.
https://youtu.be/2RAJj6HaEoE