
ಪುನರ್ಜನ್ಮಕ್ಕೆ ಸಂಬಂಧಿಸಿದ ಅನೇಕ ನಂಬಿಕೆಗಳಿವೆ. ಅನೇಕರು ಪುನರ್ಜನ್ಮವನ್ನು ನಂಬುತ್ತಾರೆ. ಪುನರ್ಜನ್ಮ ನಂಬುವವರಿಗೆ ಇಲ್ಲೊಂದು ಆಸಕ್ತಿದಾಯಕ ಘಟನೆಯಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಬ್ಬಳು, ತನ್ನ ಮಗನ ಪುನರ್ಜನ್ಮದ ಬಗ್ಗೆ ಬರೆದಿದ್ದಾಳೆ.
ವರದಿಯ ಪ್ರಕಾರ, ಅಮೆರಿಕದ ಟೆಕ್ಸಾಸ್‌ನಲ್ಲಿ ವಾಸಿಸುತ್ತಿರುವ ಅನ್ನಾ ಎಂಬ ಮಹಿಳೆ ವಿಚಿತ್ರ ಘಟನೆಯನ್ನು ಟಿಕ್‌ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಹಿಂದಿನ ಜನ್ಮದಲ್ಲಿ ಮಗ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದನಂತೆ. ಈ ವಿಷ್ಯವನ್ನು ಆಕೆ ಮಗನೇ ಆಕೆಗೆ ಹೇಳಿದ್ದನಂತೆ. ಮಹಿಳೆ ತನ್ನ ಮಗನೊಂದಿಗಿನ ಸಂಭಾಷಣೆಯ ವಿಡಿಯೊವನ್ನು ಹಂಚಿಕೊಂಡಿದ್ದಾಳೆ.
BIG NEWS: ಸರ್ಕಾರದಿಂದ ಹೊಸ ನಿಯಮ – ಇನ್ಮುಂದೆ ಇವರುಗಳಿಗೆ ಸಿಗೋಲ್ಲ ʼಸಿಮ್ʼ ಕಾರ್ಡ್
ಈ ವಿಡಿಯೋವನ್ನು ಕಾರಿನಲ್ಲಿ ಚಿತ್ರೀಕರಿಸಲಾಗಿದೆ. ಈ 10 ನಿಮಿಷಗಳ ವಿಡಿಯೋದಲ್ಲಿ, ಅವಳ ಮಗ ಆಘಾತಕಾರಿ ವಿಷಯಗಳನ್ನು ಹೇಳಿದ್ದಾನೆ. ಹಿಂದಿನ ಜನ್ಮದಲ್ಲಿ ರಸ್ತೆಯ ಮೂಲಕ ಹಾದುಹೋಗುವಾಗ, ಅಪಘಾತದಲ್ಲಿ ಸಾವನ್ನಪ್ಪಿದ್ದೆ. ಸಾಯುವ ಸಂದರ್ಭದಲ್ಲೂ ನಾನು ಬಾಲಕನಾಗಿದ್ದೆ ಎಂದು ಆತ ಹೇಳಿದ್ದಾನೆ.
ಮಗ ಹಿಂದಿನ ಜನ್ಮದ ಕಥೆ ಹೇಳ್ತಿದ್ದರೆ, ತಾಯಿಗೆ ಭಯವಾಗಿತ್ತಂತೆ. ಕಣ್ಣಿಗೆ ಕಟ್ಟುವಂತೆ ಮಗ, ಸಾವಿನ ಸಂಗತಿಯನ್ನು ಹೇಳಿದ್ದನಂತೆ. ಹಿಂದಿನ ಜನ್ಮದಲ್ಲಿ ತಾನು ಸತ್ತ ಸಮಯ ಹಾಗೂ ವಯಸ್ಸನ್ನು ಮಗ ಸ್ಪಷ್ಟವಾಗಿ ಹೇಳಿದ್ದಾನೆಂದು ಆಕೆ ಹೇಳಿದ್ದಾಳೆ.
ಬಾಹ್ಯಾಕಾಶದಲ್ಲಿ ಚೀನಾದ ಉಪಗ್ರಹ ಪುಂಜ….! ಭೂಮಿಯ ಇಂಚಿಂಚು ಜಾಗದ ಮೇಲೂ ಇರಲಿದೆ ಡ್ರ್ಯಾಗನ್ ರಾಷ್ಟ್ರದ ಕಣ್ಣು
ಮಹಿಳೆ ಮತ್ತು ಆಕೆಯ ಮಗನ ನಡುವಿನ ಈ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ.